ದಾವಣಗೆರೆ: ಕೇದಾರ ಪೀಠದ ತಳಬುಡ ಬಿಗಿ ಇಲ್ಲದ ಮೇಲೆ, ಉಜ್ಜಯಿನಿ ಪೀಠದ ತಳಬುಡದ ಬಗ್ಗೆ ಇವರಿಗ್ಯಾಕೇ, ಇವರೊಬ್ಬರು ಸಾಮಾನ್ಯ ಅರ್ಚಕರು ಎಂದು ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀಯವರು ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರಂಭಾಪುರಿ ಪೀಠದ ಶಾಖ ಮಠವಾದ ಪುರವರ್ಗ ಮಠದ ಪೂಜ್ಯ ಶ್ರೀ ಒಂಕಾರ ಶಿವಾಚಾರ್ಯ ಶ್ರೀ, ಉಜ್ಜಯಿನಿ ಪೀಠ ಓಡಿ ಬಂದ ಮಹಿಳೆ ಇದ್ದಂತೆ ಎಂದು ಕೇದಾರ ಶ್ರೀ ಹೇಳಿದ್ದಾರೆ. ಆದರೆ ಇದೇ ಉಜ್ಜಯಿನಿ ಪೀಠದಿಂದಲೇ ಇದೇ ಕೇದಾರ ಪೀಠದ ಭೀಮಾಶಂಕರಲಿಂಗ ಶ್ರೀಯವರು ಕೂಡ ಅಧಿಕಾರ ತೆಗೆದುಕೊಂಡವರು. ಇವರೇನಾದ್ರು ಮತ್ತೆ? ಎಂದು ಪ್ರಶ್ನಿಸಿದ್ದಾರೆ.
ಭೀಮಾಶಂಕರಲಿಂಗ ಶ್ರೀ ಮಾತುಗಳಿಗೆ ರಂಭಾಪುರಿ ಪೀಠದ ಶ್ರೀಗಳು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ. ರಂಭಾಪುರಿ ಶ್ರೀ ಹಾಗು ಕೇದಾರ ಶ್ರೀ ಇಬ್ಬರು ಉಜ್ಜಯಿನಿ ಪೀಠದ ಬಗ್ಗೆ ಬಹಳ ಕೀಳು ಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ. ಪಂಚಪೀಠಗಳಿಗೆ ಅಪಾರ ಪ್ರಮಾಣದ ಭಕ್ತರಿದ್ದಾರೆ. ಕರ್ನಾಟಕದಲ್ಲಿ ಇರುವುದು ಒಂದೇ ಒಂದು ಪೀಠ ಅದು ರಂಭಾಪುರಿ ಪೀಠ, ಉಜ್ಜಯಿನಿ ಪೀಠ ಇಲ್ವೇ ಇಲ್ಲ ಎಂದಿದ್ದಾರೆ. ಈ ಪೀಠದ ಬಗ್ಗೆ ಮಾತನಾಡಲು ನೈತಿಕತೆಯ ಹಕ್ಕು ಇವರಿಗೇನಿದೆ? ಇದು ಖಂಡನೀಯ. ಮತ್ತೊಂದು ಪೀಠಕ್ಕೆ ನೀವ್ಯಾಕೆ ಕೈ ಹಾಕ್ತೀರಿ? ಭಕ್ತರು ಈ ವಿಚಾರವಾಗಿ ಬೇಸರಗೊಂಡಿದ್ದಾರೆ. ಆಂತರಿಕ ಕಲಹಗಳಿದ್ದರೆ ಮುಕ್ತವಾಗಿ ಬಗೆಹರಿಸಿಕೊಳ್ಳಿ, ಹೀಗೆ ಬಹಿರಂಗ ಸಭೆಯಲ್ಲಿ ಹೇಳುವುದು ಸರಿಯಲ್ಲ ಎಂದಿದ್ದಾರೆ.
ಉನ್ನತ ಸ್ಥಾನದಲ್ಲಿ ಕುಳಿತು ಇವರು ಸಂವಿಧಾನದ ಬಗ್ಗೆ ಅಗೌರವದಿಂದ ಮಾತನಾಡಿರುವುದು ಭಕ್ತರಲ್ಲಿ ಗೊಂದಲ ಮೂಡಿಸಿದೆ. ತಮ್ಮ ಪೀಠ ಶ್ರೇಷ್ಠ ಇನ್ನೊಬ್ಬರ ಪೀಠ ಕನಿಷ್ಠ ಎಂಬ ಭಾವನೆ ಹುಟ್ಟುಹಾಕಿದ್ದಾರೆ. ಎಲ್ಲಾ ಗೊಂದಲಕ್ಕೆ ಎಡೆ ಮಾಡಿಕೊಟ್ಟ ಹೇಳಿಕೆಗಳನ್ನು ಹಿಂಪಡೆಯಬೇಕು. ಸಮಾನ ಪೀಠಗಳಿಗೆ ಗೌರವ ಸೂಚಿಸುವ ಸಂಬಂಧ ಪ್ರೀತಿ ವಿಶ್ವಾಸ ಇಟ್ಟುಕೊಳ್ಳಿ. ಬೇಡವಾದಲ್ಲಿ ಅವರ ಪಾಡಿಗೆ ಅವರಿರಬೇಕು. ಅದನ್ನು ಬಿಟ್ಟು ಮತ್ತೊಂದು ಮಠದ ವಿಚಾರಕ್ಕೆ ಕೈ ಹಾಕುವುದು ಸರಿಯಲ್ಲ. ಇವರು ಗುರುಗಳೇ ಅಲ್ಲ, ಎಲ್ಲೋ ಕೇದಾರದಲ್ಲಿ ಪೀಠ ಇಟ್ಕೊಂಡು ಇಲ್ಲಿ ಬಂದು ಪೀಠ ಕಟ್ಟುವುದ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇದಾರ ಶ್ರೀ ವಾಗ್ದಾಳಿ: ಶನಿವಾರ ಹರಿಹರ ತಾಲೂಕಿನ ಶಿವನಹಳ್ಳಿಯ ಕಾರ್ಯಕ್ರಮದಲ್ಲಿ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದ ಬಗ್ಗೆ, ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರ ಗುರುಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ಉಜ್ಜಯಿನಿ ಪೀಠದ ವಿರುದ್ಧ ಮಾತನಾಡಿ ಪಂಚಪೀಠಗಳಲ್ಲಿ ಕರ್ನಾಟದಲ್ಲಿ ಇರುವುದು ಒಂದೇ ಪೀಠ ಅದು ರಂಭಾಪುರಿ ಪೀಠ. ನೀವು ಕೇಳಬಹುದು ಉಜ್ಜಯಿನಿ ಪೀಠ ಇಲ್ಲೇ ಇದೆ ಎಂದು ಅದು ನಡುವೆ ಬಂದಿದ್ದು, ಉಜ್ಜಯಿನಿ ಪೀಠ ಎನ್ನುವುದು ಓಡಿ ಬಂದ ಹೆಣ್ಣುಗಳು ಇದ್ದಂತೆ. ಸಿದ್ದಲಿಂಗ ಶಿವಾಚಾರ್ಯರು ಕಾಗದ ಬರೆದು ಇಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿರುವ ಉಜ್ಜಯಿನಿ ಪೀಠ ಉದ್ಧಾರ ಮಾಡಬೇಕೆಂದು ಪತ್ರ ಬರೆದಿಟ್ಟಿದ್ದಾರೆ. ನಿಜವಾದ ಪೀಠ ಮಧ್ಯ ಪ್ರದೇಶದಲ್ಲಿದೆ. ಆಂಧ್ರಪ್ರದೇಶದಲ್ಲಿ ಶ್ರೀಶೈಲ ಪೀಠ, ಉತ್ತರಾಖಂಡದಲ್ಲಿ ಕೇದಾರ ಪೀಠ, ಉತ್ತರ ಪ್ರದೇಶದಲ್ಲಿ ಕಾಶಿ ಪೀಠ, ಕರ್ನಾಟಕದಲ್ಲಿ ರಂಭಾಪುರಿ ಪೀಠ ಇದೆ. ಆದರೆ ಈ ಉಜ್ಜಯಿನಿ ಪೀಠ ಮಧ್ಯೆ ಬಂದಿದ್ದು ಎಂದು ವಾಗ್ದಾಳಿ ನಡೆಸಿದ್ದರು.
ಜೀವರ್ಗಿಯಲ್ಲಿ ನಡೆದ ದಸರಾ ದರ್ಬಾರ್ ನಲ್ಲಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವಿರೋಧ ಮಾಡಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯನವರ ನಿವಾಸದ ಮುಂದೆ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ನೀವು ಪ್ರತಿಭಟನೆಗೆ ಕೂತಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಂದಿನ ಸಿಎಂ ಹೇಳಿದ್ದರು. ಈ ವೇಳೆ ಶ್ರಿಗಳು ಆಕ್ಷೇಪ ವ್ಯಕ್ತಪಡಿಸಿದ್ದ ಬಗ್ಗೆ ತಿಳಿಸಿದ್ದರು.
ಇದನ್ನೂ ಓದಿ: ನಮ್ಮ ಹೋರಾಟ ಮೀಸಲಾತಿ ರಕ್ಷಣೆಗಾಗಿಯೇ ಹೊರತು, ಯಾರ ವಿರುದ್ಧ ಅಲ್ಲ: ರೇಣುಕಾನಂದ ಸ್ವಾಮೀಜಿ