ETV Bharat / state

55 ವರ್ಷದ ಜೀವನ ಜರ್ನಿ ಮುಗಿಸಿದ ವೃದ್ಧ ದಂಪತಿ.. ಸಾವಿನಲ್ಲೂ ಒಂದಾದ ಬೆಣ್ಣೆನಗರಿಯ ಜೋಡಿ - ಸಾವಿನಲ್ಲಿ ಒಂದಾದ ಜೋಡಿ

ಏಕಕಾಲಕ್ಕೆ ಕೊನೆಯುಸಿರು-55 ವರ್ಷಗಳ ಜೀವನ ಪಯಣ ಮುಗಿಸಿದ ದಾವಣಗೆರೆಯ ಜೋಡಿ- ಸಾವಿನಲ್ಲೂ ಒಂದಾದ ಜೋಡಿ

old couple united in death
ಸಾವಿನಲ್ಲೂ ಒಂದಾದ ವೃದ್ಧದಂಪತಿ
author img

By

Published : Dec 25, 2022, 11:05 PM IST

Updated : Dec 26, 2022, 7:58 AM IST

ದಾವಣಗೆರೆ: ಅವರಿಬ್ಬರದ್ದು ಬರೋಬ್ಬರಿ ಐದು ದಶಕಗಳ ಸುಖಿ ಸಂಸಾರ.. ನನಗೆ ನೀನು, ನಿನಗೆ ನಾನು ಎಂಬಂತೆ ಪ್ರೀತಿಯಿಂದ 55 ವರ್ಷ ಒಟ್ಟಾಗಿ ಜೀವನ ನಡೆಸಿ ಒಲವೇ ನಮ್ಮ ಬದುಕು ಎಂದು ತೋರಿಸಿದ ಅಪರೂಪದ ಕುಟುಂಬ. ಇದ್ದಕ್ಕಿದ್ದಂತೆ ಈ ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಮನೆಯ ಯಜಮಾನನಿಗೆ ಹೃದಯಸ್ತಂಭನ ಉಂಟಾಯಿತು. ಗಂಡನ ಈ ಪರಿಸ್ಥಿತಿಯನ್ನು ಕಂಡ ಧರ್ಮ ಪತ್ನಿಗೆ ಈ ಕ್ಷಣ ನಿಜಕ್ಕೂ ಮಹಾ ಆಘಾತ ತಂದಿತು. ಅಷ್ಟರಲ್ಲೇ ಎರಡು ಹಿರಿಯ ಜೀವಗಳು ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿ ಬಿಟ್ಟರು..

ಹೌದು, ನಾವಿಲ್ಲಿ ಹೇಳ ಹೊರಟಿರುವುದು ಅಪರೂಪದ ಗಂಡ-ಹೆಂಡತಿಯ ದುರಂತ ಕಥೆಯ ಬಗ್ಗೆ.. ಏಕಕಾಲಕ್ಕೆ ವೃದ್ಧ ದಂಪತಿ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ದಾವಣಗೆರೆಯಲ್ಲಿ ಶನಿವಾರ ನಡೆದಿದೆ. ನಗರದ ಎಸ್ಓಜಿ ಕಾಲೋನಿಯ ನಿವಾಸಿ ಫಕೀರಪ್ಪ ಗೋಖಾವಿ (87), ಚಂದ್ರಮ್ಮ ಫಕೀರಪ್ಪ ಗೋಖಾವಿ ಒಟ್ಟೊಟ್ಟಿಗೆ ಕೊನೆಯುಸಿರೆಳದಿರುವ ವೃದ್ಧ ದಂಪತಿ.

ಫಕೀರಪ್ಪನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಅದರೇ ಇದ್ದಕ್ಕಿದ್ದಂತೆ ಫಕೀರಪ್ಪ ಹೃದಯ ಸ್ತಂಭನದಿಂದ(Cardiac arrest) ಕುಸಿದು ಬಿದ್ದಿದ್ದಾರೆ. ಪತಿ ಕುಸಿದುಬಿದ್ದಿವುದನ್ನು ಗಮನಿಸಿದ ಪತ್ನಿ ಚಂದ್ರಮ್ಮ ಅವರಿಗೆ ಅದೇ ಕ್ಷಣದಲ್ಲಿ ನೋಡ ನೋಡುತ್ತಿದ್ದಂತೆ ದಿಢೀರ್ ಆಕಾಶವೇ ತಲೆ ಮೇಲೆ ಬಿದ್ದಂತೆ ಆಘಾತವಾಗಿದೆ. ಇಬ್ಬರೂ ಕೂಡ ಕೆಲವೇ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ವೃದ್ಧ ದಂಪತಿ ಸಾವಿನಲ್ಲೂ ಜೊತೆಯಾಗಿದ್ದಾರೆ.

ಐವತ್ತೈದು ವರ್ಷಗಳ ದಾಂಪತ್ಯ ಜೀವನ ಮುಗಿಸಿದ ವೃದ್ಧ ದಂಪತಿ: ಮೃತ ವೃದ್ಧ ದಂಪತಿ ಮದುವೆಯಾಗಿ 55 ವರ್ಷಗಳು ಉರುಳಿವೆ. ಅದರೆ ಇದೀಗ ಈ ದಾಂಪತ್ಯವನ್ನು ಮುಗಿಸಿದ್ದಾರೆ.

ಐದು ದಶಕ, ಅನ್ಯೋನ್ಯ ಸಂಸಾರ.. ಪತಿ ಫಕೀರಪ್ಪ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ್ದರು, ಪತ್ನಿ ಚಂದ್ರಮ್ಮ ಸ್ವಾತಂತ್ರ್ಯ ಸಿಗುವ ವೇಳೆ ಜನಿಸಿದ್ದರು. ಐವತ್ತೈದು ವರ್ಷಗಳ ಇವರಿಬ್ಬರ ಜೀವನ ಅನ್ಯೋನವಾಗಿತ್ತು.

ಇತ್ತೀಚೆಗಷ್ಟೇ ಕೆಲಸ ಬಿಟ್ಟು ವಿಶ್ರಾಂತಿ ಪಡೆಯುತ್ತಿದ್ದ ಫಕೀರಪ್ಪ.. ವೃದ್ಧ ಫಕೀರಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲೂ ಸಹ ಮನೆಯಲ್ಲಿ ಕೈಕಟ್ಟಿ ಕೂರದೇ ಈರುಳ್ಳಿ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.‌ ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ವಹೋಸಹಜ ಕಾಯಿಲೆಗಳು ಅವರ ಬೆನ್ನುಬಿದ್ದಿದ್ದವು. ಹೀಗಾಗಿ ಪತಿ ಫಕೀರಪ್ಪ ಅವರ ಲಾಲನೆ‌ ಪಾಲನೆ‌ ಹಾಗು ದಿನಚರಿಗಳನ್ನು ಪತ್ನಿ ಅವರು ಚಂದ್ರಮ್ಮ ನೋಡಿಕೊಳ್ಳುತ್ತಿದ್ದರು.

ಸೊಸೆಯನ್ನು ತವರಿಗೆ ಕಳಿಸಿದ್ದ ದಂಪತಿ.. ಹೊಳೆಹೊನ್ನುರಿಗೆ ಹೊರಟಿದ್ದ ಫಕೀರಪ್ಪನ ಸೊಸೆ ಪುಷ್ಪ ಅವರನ್ನು ವೃದ್ಧ ದಂಪತಿ ಊರಿಗೆ ಕಳುಹಿಸಿಕೊಟ್ಟಿದ್ದರು. ಹುಷಾರಗಿ ಹೋಗಿ ಬಾರವ್ವ ಎಂದು ಕಳುಹಿಸಿಕೊಟ್ಟಿದ್ದ ಫಕೀರಪ್ಪನಿಗೆ ಭಾನುವಾರ ಸಂಜೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಕಣ್ಣೆದುರೇ ಬಾಳುಕೊಟ್ಟು, ಈವರೆಗೆ ಕೈಹಿಡಿದು ಸಾಗಿ ಬಂದ ಪತಿಗೆ ಈ ರೀತಿ ಆಗಿದ್ದನ್ನು ಕಂಡ ಚಂದ್ರಮ್ಮ ಕೂಡ ಹೃದಯಸ್ತಂಭನಕ್ಕೆ ಒಳಗಾದರು. ಈ ಘಟನೆ ನೋಡಿದ ಚಂದ್ರಮ್ಮ ಕೂಡ ಹೃದಯಘಾತವಾಗಿ ಐವತ್ತೈದು ವರ್ಷಗಳ ಬದುಕನ್ನು ಕೊನೆಗೊಳಿಸಿದ್ದಾರೆ.

ಪ್ರೀತಿಗೆ ಸಾಕ್ಷಿ ಇವರ ಆದರ್ಶ ಜೀವನ.. ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಎಷ್ಟೋ ದಂಪತಿಗಳ ಮಧ್ಯೆ ಬಿರುಕು ಉಂಟಾಗಿ ಸಂಸಾರ ಬೀದಿಗೆ ಬಂದಿರುವ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇಂಥಹ ಸಂದರ್ಭದಲ್ಲಿ ಗಂಡನ ಅಗಲಿಕೆಯ ನೋವು ತಾಳದೇ ಪತ್ನಿ ಸಹ ಅದೇ ಸಮಯದಲ್ಲಿ ಪತಿಯೊಟ್ಟಿಗೆ ಜೀವನ ಯಾತ್ರೆ ಮುಗಿಸಿರುವುದು ಈ ದಂಪತಿಯ ನಡುವಿನ ಆ ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಇವರ ಆತ್ಮಕ್ಕೆ ಶಾಂತಿ ಕೊರೋಣ..

ಇದನ್ನೂ ಓದಿ:ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ : ಬೆಂಗಳೂರಲ್ಲಿ ಆ ದಿನ ಮನೆಗೆ ಬಂದಿದ್ದವರ ಮೇಲೆ ಗುಮಾನಿ

Last Updated : Dec 26, 2022, 7:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.