ETV Bharat / state

ಪಾಸ್ ದುರ್ಬಳಕೆಯಾಗಿದೆ ಅನ್ನೋದು ಸತ್ಯಕ್ಕೆ ದೂರವಾದ ಮಾತು: ದಾವಣಗೆರೆ ಮೇಯರ್

ಲಾಕ್​ಡೌನ್​ ನಡುವೆ ಆಯ್ದ ವಾಹನಗಳಿಗೆ ಮಾತ್ರ ಪಾಸ್​ ವಿತರಿಸಲಾಗಿದೆ. ಆದರೆ ದಾವಣಗೆರೆಯಲ್ಲಿ ಪಾಸ್​ ವಿತರಣೆ ದುರ್ಬಳಕೆಯಾಗಿದೆ ಎಂಬ ಮಾತುಗಳು ಕೇಳಿಬಂದಿತ್ತು.

No Passes will Misused Mayor Ajay Kumar clarified
ಪಾಸ್ ದುರ್ಬಳಕೆಯಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು: ಮೇಯರ್
author img

By

Published : Apr 8, 2020, 7:32 PM IST

ದಾವಣಗೆರೆ: ಲಾಕ್​​​ಡೌನ್ ಹಿನ್ನೆಲೆಯಲ್ಲಿ ಅವಶ್ಯಕ ಬಳಕೆಗಾಗಿ ಮಹಾನಗರ ಪಾಲಿಕೆಯಿಂದ 250 ಪಾಸ್ ವಿತರಿಸಲಾಗಿದೆ. ಆದ್ರೆ ಈ ಪಾಸುಗಳು ದುರ್ಬಳಕೆಯಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಮೇಯರ್ ಅಜಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪಾಸ್ ದುರ್ಬಳಕೆಯಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು: ಮೇಯರ್

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಾವು.‌ ಪಾಸ್ ನೀಡುವಾಗ ಎಲ್ಲಾ ದಾಖಲಾತಿ ಪಡೆದೇ ನೀಡಿದ್ದೇವೆ. ಯಾವ ಪಾಸ್ ಕೂಡಾ ಮಿಸ್ ಯೂಸ್ ಆಗಿಲ್ಲ. ನಕಲಿ ಪ್ರಿಂಟ್ ಮಾಡಿಸಿ ಪಾಸ್ ಬಳಕೆ ಕುರಿತಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಈಗಾಗಲೇ ಪಾಲಿಕೆಯಿಂದ ಅನುಮತಿ ಪಡೆದ ಅಂಗಡಿಗಳು, ಅವಶ್ಯಕ ಕಾರ್ಯ ನಿರ್ವಹಿಸುವವರಿಗೆ ಪಾರದರ್ಶಕವಾಗಿಯೇ ಪಾಸ್ ಗಳನ್ನು ನೀಡಲಾಗಿದೆ‌ ಎಂದು ಅಜಯ್ ಕುಮಾರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.