ETV Bharat / state

ಆಟೋ ಡ್ರೈವರ್​ ಪುತ್ರಿಗೆ 5 ಚಿನ್ನದ ಪದಕ.. 4 ಗೋಲ್ಡ್​ ಮೆಡಲ್​ ಪಡೆದು ರೈತನ ಮಗಳ ಸಾಧನೆ ​

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂದು 9ನೇ ಘಟಿಕೋತ್ಸವ ನಡೆಯಿತು. ಆಟೋ ಚಾಲಕನ ಮಗಳಾದ ಸ್ವಪ್ನ ಐದು ಚಿನ್ನದ ಪದಕಗಳನ್ನು ಪಡೆದುಕೊಂಡರು. ಅಲ್ಲದೇ ರೈತನ ಮಗಳಾದ ಶೃತಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಘಟಿಕೋತ್ಸವದಲ್ಲಿ ಬಡ ಹಾಗೂ ರೈತರ ಮಕ್ಕಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದ್ರು.

ಐದು ಮತ್ತು ನಾಲ್ಕು ಚಿನ್ನದ ಪದಕ ಪಡೆದ ಸ್ವಪ್ನ ಹಾಗೂ ಶೃತಿ

author img

By

Published : Mar 24, 2022, 5:52 PM IST

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂದು ಒಂಬತ್ತನೇ ಘಟಿಕೋತ್ಸವ ಜರುಗಿತು. ಈ ಘಟಿಕೋತ್ಸವದಲ್ಲಿ ಜಿಲ್ಲೆಯ ಬಸವನಾಳು ಗ್ರಾಮದ ನಿವಾಸಿಯಾದ ಸ್ವಪ್ನ ಹಾಗೂ ಜಗಳೂರು ತಾಲೂಕಿನ ಲಿಂಗನಣ್ಣನ ಹಳ್ಳಿಯ ಶೃತಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಇವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದ್ರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಒಂಬತ್ತನೇ ಘಟಿಕೋತ್ಸವ

ಸ್ವಪ್ನ ಅವರು ಆಟೋ ಚಾಲಕನ ಮಗಳಾಗಿದ್ದು, ಎಂಬಿಎ ಪದವಿಯಲ್ಲಿ ಟಾಪರ್​​ ಆಗಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ತಾಯಿ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡ್ತಿದ್ದಾರೆ. ಎಂಕಾಂ ತನಕ ಓದಿದ ಸ್ವಪ್ನಗೆ ಆರ್ಥಿಕ ಸಂಕಷ್ಟ ಹಿನ್ನೆಲೆ ಮುಂದೆ ಓದಲು ಆಗಲಿಲ್ಲ. ಹಾಗಾಗಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ ಇವರಿಗೆ ಕೆಲಸ ಮಾಡುವಾಗ ಬೇರೆಯವನ್ನು ನೋಡಿ ಓದಬೇಕೆನಿಸಿ, ಕೆಲಸದ ಜೊತೆಗೆ ಎಂಬಿಎ ಓದುತ್ತಾರೆ. ಇದೀಗ ಎಂಬಿಎಯಲ್ಲಿ ಟಾಪರ್​ ಆಗಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಸ್ಟೋರ್ ಮ್ಯಾನೇಜರ್ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ: ಪುನೀತ್ ಭಾವಚಿತ್ರದ ಬೆಳ್ಳಿ ಡಾಲರ್: ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿ ದಂಪತಿಯ ಗಿಫ್ಟ್‌

ದಾವಣಗೆರೆ ಜಿಲ್ಲೆಯ ಬರಪೀಡಿತ ಜಗಳೂರು ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಶೃತಿಯವರ ತಂದೆ ಕೃಷಿಕರಾಗಿದ್ದಾರೆ. ರೈತನ ಮಗಳಾದ ಶೃತಿ ಇದೀಗ ಹೆತ್ತವರಿಗೆ ಹೆಮ್ಮೆ ಎಂಬಂತೆ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮನೆಯಲ್ಲಿ ಕಷ್ಟದ ಪರಿಸ್ಥಿತಿ ಇದ್ದರೂ, ಶೃತಿಯವರು ಓದಲು ಅವರ ಅಣ್ಣ, ಮಾವಂದಿರು ಸಹಾಯ ಮಾಡಿರುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.