ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧ ಪಾರ್ಕ್ಗಳಲ್ಲಿ 1.94 ಕೋಟಿ ವೆಚ್ಚದಲ್ಲಿ ವ್ಯಾಯಾಮ ಹಾಗೂ ಮಕ್ಕಳ ಪ್ಲೇ ಝೋನ್ ನಿರ್ಮಾಣವಾಗಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ್ ಸ್ವತಃ ಜೋಕಾಲಿ ಆಡುವ ಮೂಲಕ ಉದ್ಘಾಟನೆ ಮಾಡಿದರು.
ನಗರದ ವಿಶ್ವೇಶ್ವರಯ್ಯ ಪಾರ್ಕ್, ತರಳಬಾಳು ಬಡಾವಣೆ ಪಾರ್ಕ್, ಸರಸ್ವತಿ ಬಡಾವಣೆ ಪಾರ್ಕ್, ಬಳ್ಳಾರಿ ಸಿದ್ದಮ್ಮ ಪಾರ್ಕ್, ಎಎಂಎ ಕಾಲೇಜು ಪಾರ್ಕ್ ಸೇರಿದಂತೆ ನಗರದ ಎಂಟು ಪಾರ್ಕ್ಗಳಲ್ಲಿ ವ್ಯಾಯಾಮ ಹಾಗೂ ಮಕ್ಕಳ ಕ್ರೀಡಾ ಕೇಂದ್ರವನ್ನು ಸಂಸದರು ಉದ್ಘಾಟಿಸಿದರು. ಇನ್ನು ಸ್ವತಃ ಸಂಸದರೇ ಜೋಕಾಲಿ ಆಡುವ ಮೂಲಕ ಗುಣಮಟ್ಟವನ್ನು ಪರಿಶೀಲನೆ ಮಾಡಿದರು. ಚೀನಾದಿಂದ ಮಕ್ಕಳ ಆಟಿಕೆಗಳನ್ನು ತರಿಸಲಾಗಿದೆ, ಮುಂದಿನ ದಿನಗಳಲ್ಲಿ ನಗರವನ್ನು ಮತ್ತಷ್ಟು ಸ್ಮಾರ್ಟ್ ಮಾಡುವುದಾಗಿ ಸಂಸದರು ತಿಳಿಸಿದರು.
ಇದೇ ವೇಳೆ ನಿಜಲಿಂಗಪ್ಪ ಬಡಾವಣೆಯಲ್ಲಿ ಇ ಲೈಬ್ರರಿಯನ್ನು ಸಂಸದರು ಉದ್ಘಾಟನೆ ಮಾಡಿದ್ದು, ಸಂಸದರಿಗೆ ಶಾಸಕ ರವೀಂದ್ರನಾಥ್ ಸಾಥ್ ನೀಡಿದರು.