ದಾವಣಗೆರೆ: ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ದುರಂತವಾಗಿ 24 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರಿಂದ ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕೊರೊನಾ ಕಟ್ಟಿ ಹಾಕಲು ಜಂಟಿಯಾಗಿ ನುರಿತ ವೈದ್ಯರ ಸಮ್ಮುಖದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಬೆಡ್ ಹಾಗೂ ವೈದ್ಯರ ಕೊರತೆ ಬಗ್ಗೆ ಸುದೀರ್ಘವಾಗಿ ಜಿಲ್ಲಾಸ್ಪತ್ರೆಯಲ್ಲಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಸಂಸದ ಜಿಎಂ ಸಿದ್ದೇಶ್ವರ್, ನಮ್ಮ ಜಿಲ್ಲೆಯಲ್ಲಿ ಸೋಂಕಿರ ಸಂಖ್ಯೆ 2,048 ಇದ್ದು, ಕೊರೊನಾ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ನಡೆದಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಮಸ್ಯೆ ಇದ್ದು, ಅದನ್ನು ಈಗಾಗಲೇ ಪೊಲೀಸರು ಸರ್ಪಗಾವಲಿನಲ್ಲಿ ತರಿಸಲಾಗುತ್ತಿದೆ ಎಂದರು.
ಬೆಡ್ಗಳ ಸಮಸ್ಯೆ ಎದುರಾಗದಂತೆ ಆಯಾ ಕಲ್ಯಾಣಮಂಟಪಗಳನ್ನು ತೆಗೆದುಕೊಂಡು ಬೆಡ್ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದ್ದು, ನಮ್ಮಲ್ಲಿ ವೆಂಟಿಲೇಟರ್ ಸಮಸ್ಯೆ ಇಲ್ಲ, ಇನ್ನೂ ಹದಿನೈದು ವೆಂಟಿಲೇಟರ್ಗಳಿದ್ದು ಅದನ್ನು ನಿರ್ವಹಿಸಿಲು ಕೆಲಸಗಾರರ ಅವಶ್ಯಕವಾಗಿದೆ. ವೈದ್ಯರ ಸಮಸ್ಯೆ ನೀಗಿಸಲು ಖಾಸಗಿ ವೈದ್ಯರನ್ನು ತೆಗೆದುಕೊಳ್ಳಲು ಚಿಂತನೆ ನಡೆದಿದ್ದು, ಬೇಕಾಗಿದ್ದ ನರ್ಸ್ಗಳನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇವೆ ಎಂದರು.
348 ಆಕ್ಸಿಜನ್ ಬೆಡ್ಗಳಿದ್ದು, ಕ್ರಮೇಣವಾಗಿ ರೋಗಿಗಳು ಡಿಸ್ಚಾರ್ಜ್ ಆಗುತ್ತಿದ್ದರಿಂದ ಸಮಸ್ಯೆ ತಲೆದೋರಿಲ್ಲ ಎಂದರು. ಕಳೆದ 2020ರ ಮಾರ್ಚ್ನಿಂದ ಹಿಡಿದು 2021ರ ಮೇ ತನಕ 285 ಜನ ಕೊರೊನಾದಿಂದ ಸಾವನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.