ದಾವಣಗೆರೆ : ರೆಡ್‌ಫೋರ್ಟ್ ಮೇಲೆ ದಾಳಿ ನಡೆಸಿದವರು ಖಲಿಸ್ತಾನದ ಕಿಡಿಗೇಡಿಗಳು, ಭಯೋತ್ಪಾದಕರು ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜಗಳೂರಿನಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಳೆದ ದಿನ ನಡೆದಿರುವ ಘಟನೆ ಸ್ವಾತಂತ್ರ್ಯ ಬಂದ ಮೇಲೆ ನಡೆದ ಮೊದಲ ಕಹಿ ಘಟನೆಯಾಗಿದೆ.
ಕಿಡಿಗೇಡಿಗಳು ಹಾಗೂ ಭಯೋತ್ಪಾದಕರು ನಮ್ಮ ರಾಷ್ಟ್ರದ ಧ್ವಜವನ್ನು ಕಿತ್ತು ಹಾಕಿ, ತಮ್ಮ ಧ್ವಜ ಹಾರಿಸಿದ್ದನ್ನು ನೋಡಿದ್ದೇವೆ. ಇದು ಎಂದೂ ಕೇಳರಿಯದ ಘಟನೆಯಾಗಿದೆ. ರೈತರ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದ ರೈತರಿಗೆ ಉಪಯೋಗವಾಗಲೆಂದು ಮೋದಿಯವರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಅನಾನುಕೂಲವಾದ್ರೆ ಈ ಕಾಯ್ದೆಗಳನ್ನು ಅವರೇ ತೆಗೆದು ಹಾಕುತ್ತಾರೆ.
ಇದನ್ನು ಸಹಿಸದ ವಿರೋಧ ಪಕ್ಷಗಳು, ರಾಜಕೀಯವಾಗಿ ಬಳಸಿಕೊಂಡಿದ್ದು, ರೈತರ ಹೆಸರಿನಲ್ಲಿ ಕಿಡಿಗೇಡಿತನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಓದಿ: ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಮೋದಿಗೆ ಪ್ರತಿಷ್ಠೆ ಅಡ್ಡಿ : ಸಿದ್ದರಾಮಯ್ಯ