ದಾವಣಗೆರೆ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ನವರು, ಭ್ರಷ್ಟಾಚಾರವನ್ನು ಹುಟ್ಟು ಹಾಕಿ ಪಾಲನೆ ಪೋಷಣೆ ಮಾಡಿದ್ದು, ಕಾಂಗ್ರೆಸ್ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿ,ಅವರು ಭ್ರಷ್ಟಾಚಾರದ ತಂದೆ ತಾಯಿ ಕಾಂಗ್ರೆಸ್, ಭ್ರಷ್ಟಾಚಾರವನ್ನು ಆರಂಭಿಸಿದವರು ಕಾಂಗ್ರೆಸ್ ನವರು ಅಂತ್ಯ ಮಾಡಿದ್ದೇ ಬಿಜೆಪಿಯವರು. ಸಿಎಂ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದು, ಸುಮ್ಮನೆ ಕಂಟ್ರಾಕ್ಟರ್ ಮೂಲಕ ಪತ್ರ ಬರೆಸೋದಲ್ಲ, ಇದು ಕಾಂಗ್ರೆಸ್ನ ಷಡ್ಯಂತ್ರ ಎಂದು ಆರೋಪಿಸಿದ್ರು.
ರಾಜ್ಯಪಾಲರಿಗೆ ಸರ್ಕಾರ ವಜಾ ಮಾಡಿ ಅಂತಾ ಹೇಳಿದ್ದಾರೆ, ನಮ್ಮದು ನಾಮ ನಿರ್ದೇಶಿತ ಸರ್ಕಾರ ಅಲ್ಲ ಜನರಿಂದ ಆಯ್ಕೆಯಾದ ಸರ್ಕಾರ, ಗಾಂಧೀಜಿಯವರು ಕಾಂಗ್ರೆಸ್ ಅನ್ನು ವಿಸರ್ಜಿಸಿ ಎಂದಿದ್ದರು, ಆದರೆ ಅವರು ಮಾಡಲಿಲ್ಲ ಎಂದರು.
ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರ:
ರಾಜಕಾರಣ ನಿಂತ ನೀರಲ್ಲ ಹರಿಯುವ ನೀರು, ಈ ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಮಿತ್ರರೂ ಅಲ್ಲ, ಜೆಡಿಎಸ್ನವರು ಎಲ್ಲಿ ತಮ್ಮ ಅಭ್ಯರ್ಥಿಗಳನ್ನು ಹಾಕಿಲ್ಲವೋ ಅಲ್ಲಿ ನಮಗೆ ಬೆಂಬಲ ಕೊಟ್ಟರೆ ತಪ್ಪಲ್ಲ ಎಂದು ಬಿಎಸ್ ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಈ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡ್ತಾರೆ ಎಂದರು.