ETV Bharat / state

ಹೆದ್ದಾರಿಯಲ್ಲಿ ಬೈಕ್​ ಸ್ಕಿಡ್​.. ಲಾರಿಗೆ ಸಿಲುಕಿ ತಾಯಿ-ಮಗು ಸಾವು, ವ್ಯಕ್ತಿ ಸ್ಥಿತಿ ಗಂಭೀರ

author img

By

Published : May 4, 2022, 7:11 PM IST

ಲಾರಿ ಚಕ್ರಕ್ಕೆ ಸಿಲುಕಿ ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಸಂಭವಿಸಿದೆ.

mother-and-child-died-in-road-accident-near-davanagere
ಹೆದ್ದಾರಿಯಲ್ಲಿ ಬೈಕ್​ ಸ್ಕಿಡ್​.. ಲಾರಿಗೆ ಸಿಲುಕಿ ತಾಯಿ, ಮಗು ಸಾವು, ವ್ಯಕ್ತಿ ಗಂಭೀರ

ದಾವಣಗೆರೆ: ಬೈಕ್​ ಸ್ಕಿಡ್ ಆದ ಪರಿಣಾಮ ಲಾರಿ ಚಕ್ರಕ್ಕೆ ಸಿಲುಕಿ ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಮೃತರು ಶಿವಮೊಗ್ಗ ಮೂಲದವರೆಂದು ತಿಳಿದುಬಂದಿದೆ.

ಶಿವಮೊಗ್ಗದ ಒಂದೇ ಕುಟುಂಬದ ಮೂವರು ಬೈಕ್​ನಲ್ಲಿ ದಾವಣಗೆರೆಗೆ ಬರುವ ವೇಳೆ ಈ ಘಟನೆ ನಡೆದಿದೆ. ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್​ ಚಲಾಯಿಸುತ್ತಿದ್ದವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್​ ಸ್ಕಿಡ್ ಆಗಿದ್ದು, ಲಾರಿ ಚಕ್ರಕ್ಕೆ ಬಿದ್ದ ತಾಯಿ-ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಈ ರೀತಿಯ ಅಪಘಾತಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹೆದ್ದಾರಿ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವುದೇ ಅಪಘಾತಕ್ಕೆ ಕಾರಣವಾಗಿದೆ. ತ್ವರಿತವಾಗಿ ಕಾಮಗಾರಿ ಮುಗಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರಿಂದಲೇ ಈ ರೀತಿಯ ಸಾಕಷ್ಟು ಅಪಘಾತಗಳು ನಡೆಯುತ್ತಿವೆ ಎಂದು ದೂರಿದರು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು. ಅಪಘಾತದ ಸಂಬಂಧ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ವಾಗ್ವಾದ: ಯುವಕನನ್ನು ಗುದ್ದಿಕೊಂಡೇ ಕಾರ್ ಚಲಾಯಿಸಿದ ಕಿರಾತಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.