ETV Bharat / state

ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಹೆರಿಗೆ.. ಹೆಚ್ಚಿನ ಶುಲ್ಕದ ಬಗ್ಗೆ ಬಂದಿಲ್ವಂತೆ ದೂರು - ಚಿಗಟೇರಿ ಜನರಲ್​ ಆಸ್ಪತ್ರೆ

ತಾಯಿ ಹಾಗೂ‌ ಮಗುವನ್ನು ಪ್ರತ್ಯೇಕವಾಗಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ, ಆರು ತಿಂಗಳ ಹಿಂದೆ ಹೋಲಿಸಿದರೆ ಈಗ ಸ್ವಲ್ಪ ಹಣ ಜಾಸ್ತಿ ಆಗಬಹುದು. ಜನರಿಗೆ ಹೊರೆ ಆಗದಂತೆ, ಬಡವರಿಗೆ ಪೀಡಿಸಲಾಗಿಲ್ಲ.

Chitagere genral hospital
ಚಿಗಟೇರಿ ಜನರಲ್​ ಆಸ್ಪತ್ರೆ
author img

By

Published : Sep 5, 2020, 7:22 PM IST

ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದರೂ ಗರ್ಭಿಣಿಯರಿಗೆ ಮಾತ್ರ ಸೋಂಕು ತಗುಲಿರುವುದು ಕಡಿಮೆ. ಸೋಂಕಿತ ಗರ್ಭಿಣಿಯರಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಹೆರಿಗೆ ಮಾಡಿಸಲಾಗಿದೆ.

ಏಪ್ರಿಲ್‌ನಿಂದ ಜುಲೈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 5,009 ಹೆರಿಗೆ ಆಗಿವೆ. ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ‌ ಕೇವಲ 1,696 ಹೆರಿಗೆ ಆಗಿವೆ. ಹೆರಿಗೆಗೆ ಬಂದ ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಗ್ತಿದೆ. ಈವರೆಗೆ ಯಾವ ಕೊರೊನಾ ಸೋಂಕಿತ ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆ ಆಗಲಿ, ಖಾಸಗಿ ಆಸ್ಪತ್ರೆ ಆಗಲಿ ಚಿಕಿತ್ಸೆ ನಿರಾಕರಿಸಿಲ್ಲ ಎಂದು ತಿಳಿಸಿದರು.

ಜನ ಆರ್ಥಿಕವಾಗಿ ತೊಂದರೆಯಲ್ಲಿದ್ದು, ಸಾಧ್ಯವಾದಷ್ಟು ಕಡಿಮೆ ಶುಲ್ಕ ಪಡೆಯುವಂತೆ ಜಿಲ್ಲಾಧಿಕಾರಿಗಳು ಎಲ್ಲಾ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲ ಖಾಸಗಿ ಆಸ್ಪತ್ರೆಗಳೂ ಸ್ಪಂದಿಸಿವೆ. ಬೆಂಗಳೂರು ಸೇರಿ ಬೇರೆ ಜಿಲ್ಲೆಗೆ ಹೋಲಿಸಿದ್ರೆ ಇಲ್ಲಿ ಹೆರಿಗೆಗೆ ಪಡೆಯುತ್ತಿರುವ ಹಣ ಕಡಿಮೆ ಅಂತಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಚ್ ಎಸ್‌ ರಾಘವೇಂದ್ರ ಸ್ವಾಮಿ‌ ಮಾಹಿತಿ ಹೇಳಿದ್ದಾರೆ.

ಚಿಟಗೇರಿ ಜಿಲ್ಲಾ ಆಸ್ಪತ್ರೆ

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪಾಸಿಟಿವ್ ಇದ್ದ ಗರ್ಭಿಣಿಯವರಿಗೆ ಹೆರಿಗೆ ಮಾಡಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಪಿಪಿಇ ಕಿಟ್ ಧರಿಸಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ತಾಯಿ ಹಾಗೂ‌ ಮಗುವನ್ನು ಪ್ರತ್ಯೇಕವಾಗಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ, ಆರು ತಿಂಗಳ ಹಿಂದೆ ಹೋಲಿಸಿದರೆ ಈಗ ಸ್ವಲ್ಪ ಹಣ ಜಾಸ್ತಿ ಆಗಬಹುದು. ಜನರಿಗೆ ಹೊರೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ‌.

ಹೆರಿಗೆಗೆ ಸರ್ಕಾರಿ‌ ಆಸ್ಪತ್ರೆಗೆ ಹೋದರೆ ಕೊರೊನಾ‌ ಟೆಸ್ಟ್ ಮಾಡಿಸಿ‌ ಅಂತಾರೆ.‌ ಬಡವರು ಬಂದಾಗ ಸಮಸ್ಯೆಯಾಗುತ್ತಿದೆ. ಖಾಸಗಿ ಆಸ್ಪತ್ರೆಗೆ ಹೋದಾಗ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ. ಇದು ಸಮಸ್ಯೆಗೆ ಕಾರಣವಾಗಿದೆ. ಜನರು ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುವುದರಿಂದ ಹೆರಿಗೆ ಮಾಡಿಸಲು‌ ಕೆಲವರು ಹೆದರುತ್ತಾರೆ‌.

ಆದರೆ, ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಖಾಸಗಿ ಆಸ್ಪತ್ರೆ ಮಾನವೀಯತೆ ದೃಷ್ಟಿಯಿಂದ ಇನ್ನಷ್ಟು ಕಡಿಮೆ ದುಡ್ಡು ಪಡೆದ್ರೆ ಒಳ್ಳೇದು ಅನ್ನೋ ಭಾವನೆ ಜನರಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.