ದಾವಣಗೆರೆ : ಸರ್ಕಾರಿ ಶಾಲೆಗಳು ಅಂದ್ರೆ ಅಲ್ಲಿ ವ್ಯವಸ್ಥೆ ಸರಿ ಇರಲ್ಲ, ಸರಿಯಾದ ಶಿಕ್ಷಣ ಸಿಗಲ್ಲ ಎಂಬ ಮನಸ್ಥಿತಿಯಿಂದ ಪೋಷಕರು ಹಾಗೂ ಮಕ್ಕಳು ಮೂಗು ಮುರಿಯೋದು ಹೆಚ್ಚು. ಆದ್ರೆ, ಅದೇ ಸರ್ಕಾರಿ ಶಾಲಾ-ಕಾಲೇಜುಗಳಿಗೆ ದಾವಣಗೆರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಧುನಿಕ ಟಚ್ ನೀಡಿದ್ದಾರೆ.
ಒಟ್ಟು ₹12.32 ಕೋಟಿ ಅನುದಾನದಲ್ಲಿ 69 ಸರ್ಕಾರಿ ಶಾಲಾ-ಕಾಲೇಜುಗಳು ಸ್ಮಾರ್ಟ್ ಆಗಿದ್ದು, ಕಂಪ್ಯೂಟರ್ ಲ್ಯಾಬ್ ಸೌಲಭ್ಯ ನೀಡಿರುವುದು ಬಡ ಮಕ್ಕಳಿಗೆ ಆಸರೆಯಾಗಿದೆ.
ದಾವಣಗೆರೆಯ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಆಧುನಿಕ ಟಚ್ ನೀಡಿ ಮಕ್ಕಳಿಗೆ ಆಸರೆಯಾಗಿದ್ದಾರೆ. ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ.
ಆಧುನಿಕ ಮಾದರಿಯ ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಆನಿಮೇಟೆಡ್ ಪ್ಯಾಕೇಜ್‌ಗಳು, ಸುಸಜ್ಜಿತ ಸ್ಮಾರ್ಟ್ ಬೋಧನೆಗೆ 75 ಇಂಚು ವಿಸ್ತಾರದ ಟಚ್ ಸ್ಕ್ರೀನ್, ಕಂಪ್ಯೂಟರ್‌ಗಳಲ್ಲಿ ಲ್ಯಾಬ್ ಈ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೇವಲ ರಸ್ತೆ, ಚರಂಡಿ, ರಸ್ತೆ ಬದಿ ಸಿಗ್ನಲ್, ಸಿಸಿ ಕ್ಯಾಮೆರಾ ಅಳವಡಿಕೆ ಸೀಮಿತವಾಗದೇ ಸರ್ಕಾರಿ ಶಾಲೆಗಳಲ್ಲೂ ಆಧುನಿಕ ಸೌಲಭ್ಯಗಳನ್ನು ನೀಡಲಾಗಿತ್ತು.
ಇದೀಗ 12.32 ಕೋಟಿ ಅನುದಾನದಲ್ಲಿ ದಾವಣಗೆರೆ ನಗರದ 69 ಶಾಲಾ-ಕಾಲೇಜುಗಳು ಸ್ಮಾರ್ಟ್ ಶಾಲಾ-ಕಾಲೇಜುಗಳಾಗಿ ಪರಿವರ್ತನೆಯಾಗಿವೆ. ಅವುಗಳಲ್ಲಿ 920 ಕಂಪ್ಯೂಟರ್, 194 ಇಂಟರ‍್ಯಾಕ್ಟೀವ್ ಡಿವೈಸೈಸ್, 36 ಬಹೃತ್ ಟಚ್ ಸ್ಕೀನ್‌ಗಳಿಂದ 194 ಸ್ಮಾರ್ಟ್ ಕ್ಲಾಸ್ ಹಾಗೂ 79 ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳ ಕ್ಷಮತೆ ವೃದ್ಧಿಸಲು ಸಹಕಾರಿಯಾಗಿವೆ.
ಸರ್ಕಾರಿ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಸಿಲೆಬಸ್ ಇಂಟ್ರಡ್ಯೂಸ್ ಮಾಡ್ತಾರೆ. ಆದ್ರೆ, ಅಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕಂಪ್ಯೂಟರ್‌ಗಳೇ ಇರಲ್ಲ. ಇಂಥ ಪರಿಸ್ಥಿತಿಗೆ ಸ್ಮಾರ್ಟ್ ಸಿಟಿ ಪರಿಹಾರ ನೀಡಿದೆ.
ಸರ್ಕಾರಿ ಪ್ರೌಢ ಶಾಲೆ, ಪದವಿಪೂರ್ವ ಹಾಗೂ ಐಟಿಐ ಕಾಲೇಜುಗಳಿಗೆ ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳನ್ನು ಸೃಷ್ಟಿಸಿ ಐದು ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚುಸುವಲ್ಲಿ, ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆ ಕೊಡುಗೆಯಾಗಿದೆ.
ಕೇವಲ ಚರಂಡಿ, ರಸ್ತೆ, ಬೀದಿ ದೀಪ, ಸೈಕಲ್‌ನಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದೀಗ ಸರ್ಕಾರಿ ಶಾಲಾ-ಕಾಲೇಜುಗಳತ್ತ ಗಮನ ಕೊಟ್ಟು ಆಧುನಿಕ ಟಚ್ ನೀಡಿ ಸ್ಮಾರ್ಟ್ ತರಗತಿಗಳನ್ನು ನಡೆಯುವಂತೆ ಮಾಡಿದ್ದಾರೆ. ಇದರಿಂದ ಬಡ ಮಕ್ಕಳಿಗೂ ಸಹಾಯಕವಾಗಲಿದ್ದು, ವಿದ್ಯಾರ್ಥಿಗಳ ಸಂತಸಕ್ಕೂ ಕಾರಣವಾಗಿದೆ.
ಓದಿ: 'ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷ'.. ನಲಪಾಡ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್