ETV Bharat / state

ದಾವಣಗೆರೆಯಲ್ಲಿ ಪ್ರಾರಂಭವಾಯ್ತು ಮೊಬೈಲ್​ ಫೀವರ್​ ಕ್ಲಿನಿಕ್​ ಬಸ್​ - Mobile Fever Clinic Bus Launched at Davanagere

ಕೊರೊನಾ ವೈರಸ್​​ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಹಲವೆಡೆ ಮೊಬೈಲ್​ ಫೀವರ್​ ಕ್ಲಿನಿಕ್​ ಬಸ್​ಗಳ ಸೇವೆಯನ್ನು ಒದಗಿಸಲಾಗಿದ್ದು, ದಾವಣಗೆರೆಯಲ್ಲಿಯೂ ಸಹ ಈ ನೂತನ ಮೊಬೈಲ್​ ಫೀವರ್​ ಕ್ಲಿನಿಕ್​ ಬಸ್​ಗೆ ಚಾಲನೆ ನೀಡಲಾಗಿದೆ.

Mobile Fever Clinic Bus
ಮೊಬೈಲ್​ ಫೀವರ್​ ಕ್ಲಿನಿಕ್​ ಬಸ್​
author img

By

Published : May 27, 2020, 9:08 PM IST

ದಾವಣಗೆರೆ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್​ಗೆ ಇಂದು ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವರಾದ ಡಿಸಿಎಂ ಲಕ್ಷ್ಮಣ್ ಸವದಿ ಚಾಲನೆ ನೀಡಿದರು.

ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಜಿಲ್ಲೆಗಳಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಅನ್ನು ಈಗಾಗಲೇ ಸೇವೆಗೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಬೇರೆಡೆಗಳಲ್ಲಿ ಈಗಾಗಲೇ ಈ ಬಸ್​​ ಕಾರ್ಯ ನಿರ್ವಹಿಸುತ್ತಿದ್ದು, ಈಗ ದಾವಣಗೆರೆಯಲ್ಲಿಯೂ ಸಹ ಕಾರ್ಯ ನಿರ್ವಹಿಸಲಿದೆ.

ಮೊಬೈಲ್​ ಫೀವರ್​ ಕ್ಲಿನಿಕ್​ ಬಸ್​

ಈ ಬಸ್ ನ ವಿಶೇಷತೆಗಳೇನು...?

ಕ್ವಾರಂಟೈನ್ ಝೋನ್, ಹಳ್ಳಿ ಪ್ರದೇಶ ಸೇರಿದಂತೆ ಮನೆ ಮನೆಗೆ ತೆರಳಿ ಗಂಟಲು ದ್ರವ ಪರೀಕ್ಷೆ ಹಾಗೂ ಇನ್ನಿತರ ರೀತಿಯ ವ್ಯವಸ್ಥೆಯನ್ನು ಈ ಬಸ್ ನಲ್ಲಿ‌ ಕಲ್ಪಿಸಲಾಗಿದೆ. ನಾಲ್ವರು ವೈದ್ಯಕೀಯ ಸಿಬ್ಬಂದಿ ಈ ಬಸ್ ನಲ್ಲಿ ಇರಬಹುದು. ಇಬ್ಬರು ವೈದ್ಯರು, ನರ್ಸ್ ಇರಲು ವ್ಯವಸ್ಥೆಯನ್ನು ಒಂದೆಡೆ ಮಾಡಿದ್ದರೆ, ಮತ್ತೊಂದೆಡೆ ಕೊರೊನಾ ಶಂಕಿತರ ಸ್ವ್ಯಾಬ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ಹತ್ತುತ್ತಿದ್ದಂತೆ ಕೈ ತೊಳೆದುಕೊಳ್ಳಲು ನೀರು, ಸ್ಯಾನಿಟೈಸರ್, ಮೆಡಿಕಲ್ ಕಿಟ್ , ಸಂವಾದ ನಡೆಸಲು ಮೈಕ್, ಲೈಟ್ಸ್, ಫ್ಯಾನ್ ಅನ್ನು ಅಳವಡಿಸಲಾಗಿದೆ. ಒಟ್ಟಿನಲ್ಲಿ ಆಸ್ಪತ್ರೆಗೆ ಹೋಗಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುಲು ಕಷ್ಟ ಆಗುವವರಿಗೆ ಇದು ಅನುಕೂಲವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.