ETV Bharat / state

ಎರಡೂ‌ ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದ್ದು ನಾಚಿಕೆಗೇಡು: ಶಾಸಕ ಎಸ್.ರಾಮಪ್ಪ

ಉಪಚುನಾವಣೆಯ ಎರಡೂ‌ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಎಸ್.ರಾಮಪ್ಪ ಟೀಕಿಸಿದರು.

MLA S Ramappa reaction over by election result
ಶಾಸಕ ಎಸ್ ರಾಮಪ್ಪ ಪ್ರತಿಕ್ರಿಯೆ
author img

By

Published : Nov 2, 2021, 8:25 PM IST

ದಾವಣಗೆರೆ: ಸಿಂದಗಿ, ಹಾನಗಲ್‌ ಉಪಚುನಾವಣೆ ಫಲಿತಾಂಶ ಭವಿಷ್ಯದ 2023ರ ಚುನಾವಣೆಗೆ ದಿಕ್ಸೂಚಿ. ಆದರೆ ಉಪಚುನಾವಣೆಯ ಎರಡೂ‌ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹರದ ಕಾಂಗ್ರೆಸ್​​ ಶಾಸಕ ಎಸ್.ರಾಮಪ್ಪ ಜೆಡಿಎಸ್ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಮಾತನಾಡಿದ ಅವರು, ಸಿಎಂ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಾನೆ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಗೆಲುವಿಗಾಗಿ ಸರ್ಕಾರವೇ ಹಾನಗಲ್‌ನಲ್ಲಿ ಬೀಡುಬಿಟ್ಟಿತ್ತು, ಹಣದ ಹೊಳೆಯನ್ನೇ ಹರಿಸಿದ್ರು ಎಂದರು.

ಇದನ್ನೂ ಓದಿ: ಹಾನಗಲ್​ನಲ್ಲಿ ಕಾಂಗ್ರೆಸ್​​ಗೆ ಗೆಲುವಿನ ಹುಗ್ಗಿ.. ಸಿಎಂ ತವರಲ್ಲೇ ಬಿಜೆಪಿಗೆ ಮುಖಭಂಗ..

ವಿವಿಧ ಸಮಾಜದ ಮುಖಂಡರಿಗೆ ಸ್ವತಃ ಸಿಎಂ ಅವರೇ ಹಣ ಹಂಚಿದ್ರು. ಆದ್ರೂ, ಜನರು ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು‌ ನೀಡಿದ್ದಾರೆ. ಜೆಡಿಎಸ್ ಪಕ್ಷದವರು, ಸಿಂದಗಿ, ಹಾನಗಲ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸು‌ವ ಉದ್ದೇಶವಿತ್ತು. ಅದಕ್ಕಾಗಿಯೇ ಎರಡೂ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿದ್ರು. ಜನ ಬುದ್ಧಿವಂತರು ಅದನ್ನು ಅರ್ಥ ಮಾಡಿಕೊಂಡು ಜೆಡಿಎಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಜನ ಬಿಜೆಪಿ ತಿರಸ್ಕರಿಸಿದ್ದಾರೆ. ಭವಿಷ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯ ಹಾಗೂ‌ ಕೇಂದ್ರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಎಸ್. ರಾಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.