ETV Bharat / state

ಸಚಿವನಾಗಿ ಕ್ಷೇತ್ರವನ್ನು ಕಳೆದುಕೊಂಡಿದ್ದೆ, ಶಾಸಕನಾಗಿಯೇ ಮುಂದುವರಿಯುವೆ: ರೇಣುಕಾಚಾರ್ಯ - ministerial post

ಕೆಲ ಶಾಸಕರು ಇನ್ನೊಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಹೇಳಿದ್ದಾರೆ. ಆದ್ರೆ ನನಗೆ ಸಚಿವ ಸ್ಥಾನ ಬೇಡ. ನಾನು ಕ್ಷೇತ್ರದ ಜನರ ಜೊತೆಯಲ್ಲಿಯೇ ಇರುತ್ತೇನೆ ಎಂದು ದಾವಣಗೆರೆಯಲ್ಲಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

MLA Renukacharya
ಶಾಸಕ ಎಂ ಪಿ ರೇಣುಕಾಚಾರ್ಯ
author img

By

Published : Sep 18, 2022, 3:54 PM IST

ದಾವಣಗೆರೆ: 2013 ರಲ್ಲಿ ಸಚಿವನಾಗಿ ಕ್ಷೇತ್ರವನ್ನು ಕಳೆದುಕೊಂಡೆ. ಆದ್ದರಿಂದ ನನಗೆ ಸಚಿವ ಸ್ಥಾನ ಬೇಡ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಚುನಾವಣೆಗೂ ಮೊದಲೇ‌ ಹೊಸ‌ ಬಾಂಬ್ ಸಿಡಿಸಿದ್ದಾರೆ.

ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಕ್ಷೇತ್ರದ ಜನತೆ ಮುಖ್ಯ. ಸಚಿವ ಸ್ಥಾನವಲ್ಲ. ಕೆಲ ಶಾಸಕರು ಇನ್ನೊಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಹೇಳಿದ್ರು. ಶಾಸಕಾಂಗ ಸಭೆಯಲ್ಲಿ ಮಾತನಾಡು ಅಂದ್ರು.

ಆದರೆ ನಾನು ಮಾತನಾಡದೆ ಕ್ಷೇತ್ರಕ್ಕೆ ಬಂದು ಜನರ ಜೊತೆ ಇದ್ದೀನಿ. ನಾನು ಕ್ಷೇತ್ರದ ಜನರ ಜೊತೆಯಲ್ಲಿಯೇ ಇರುತ್ತೇನೆ. ಕೆಲವರು ಚುನಾವಣೆ ಬಂದಾಗ ಬರ್ತಾರೆ ಆಮೇಲೆ ಕಾಣದಂತೆ ಮಾಯವಾಗುತ್ತಾರೆ ಎಂದು ಪರೋಕ್ಷವಾಗಿ ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಅವರಿಗೆ ಟಾಂಗ್ ನೀಡಿದ್ರು.

ಶಾಸಕ ಎಂ ಪಿ ರೇಣುಕಾಚಾರ್ಯ

ಇದನ್ನೂ ಓದಿ: ಮಳೆಯಿಂದ ಮನೆ ಹಾನಿ: ಪರಿಹಾರ ನೀಡುವ ವಿಚಾರಕ್ಕೆ ಹಾಲಿ, ಮಾಜಿ ಶಾಸಕರ ಕಿತ್ತಾಟ

ಶಾಂತನಗೌಡ ಒಮ್ಮೆ ಅವರ ಅಣ್ಣನ ಸಾವಿನ ಅನುಕಂಪದ ಮೇಲೆ ಗೆದ್ದರು. ಅಲ್ಲದೇ ಸಿದ್ದರಾಮಯ್ಯನವರ ಅಲೆಯಲ್ಲಿ ಗೆದ್ದಿದ್ದಾರೆ. ಸ್ವಂತ ವರ್ಚಸ್ಸಿನಿಂದ ಗೆಲ್ಲುವ ಶಕ್ತಿ ಶಾಂತನಗೌಡನಿಗೆ ಇಲ್ಲ. ಮಾಜಿ ಶಾಸಕನಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.