ETV Bharat / state

ಹೊನ್ನಾಳಿ-ನ್ಯಾಮತಿ ಅತಿವೃಷ್ಟಿಪೀಡಿತ ತಾಲೂಕುಗಳೆಂದು ಘೋಷಿಸಿ: ಸಿಎಂಗೆ ರೇಣುಕಾಚಾರ್ಯ ಮನವಿ

ನ್ಯಾಮತಿ ತಾಲೂಕಿನ ಗಂಜೇನಹಳ್ಳಿರುವ ಹಿರೇಹಳ್ಳ ತುಂಬಿ ಹರಿಯುತ್ತಿರುವುದರಿಂದ, ಸಾಲಬಾಳು-ಗಂಜೇನಹಳ್ಳಿ ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಸಂಪರ್ಕ ಕಡಿತಗೊಂಡು, ನೀರು ಹೊಲಗಳಿಗೆ ನುಗ್ಗಿದೆ. ಬೆಳೆಗೆ ಹಾನಿಯಾಗಿದೆ.

ಸಿಎಂಗೆ ರೇಣುಕಾಚಾರ್ಯ ಮನವಿ
ಸಿಎಂಗೆ ರೇಣುಕಾಚಾರ್ಯ ಮನವಿ
author img

By

Published : Jul 25, 2021, 3:36 PM IST

ದಾವಣಗೆರೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಹೊನ್ನಾಳಿ ನ್ಯಾಮತಿ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಈ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅನೇಕ ಬೆಳೆಗಳು ಹಾನಿಯಾಗಿದೆ.

ಸಿಎಂಗೆ ರೇಣುಕಾಚಾರ್ಯ ಮನವಿ

ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜೇನಹಳ್ಳಿರುವ ಹಿರೇಹಳ್ಳ ತುಂಬಿ ಹರಿಯುತ್ತಿರುವುದರಿಂದ, ಸಾಲಬಾಳು-ಗಂಜೇನಹಳ್ಳಿ ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿರುವುದ್ದರಿಂದ ಸಂಪರ್ಕ ಕಡಿತಗೊಂಡಿದೆ. ನೀರು ಹೊಲಗಳಿಗೆ ನುಗ್ಗಿದ್ದು, ಬೆಳೆ ಹಾನಿಯಾಗಿದೆ. ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತಿದ್ದರಿಂದ ಶಾಸಕ ಎಂಪಿ ರೇಣುಕಾಚಾರ್ಯ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರವಾಹ ವೀಕ್ಷಿಸಲು ಪ್ರವಾಸ ಕೈಗೊಂಡಿದ್ದು, ಅಪಾರ ಪ್ರಮಾಣ ಹಾನಿ ಹಿನ್ನೆಲೆಯಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳನ್ನು ಅತಿವೃಷ್ಟಿಪೀಡಿತ ತಾಲೂಕುಗಳೆಂದು ಘೋಷಣೆ ಮಾಡುವಂತೆ ಸಿಎಂ ಗೆ ಮನವಿ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಬಿಎಸ್‌ವೈ ಸರ್ಕಾರಕ್ಕೆ 2 ವರ್ಷ: ಆಂತರಿಕ ಬೇಗುದಿ ಜೊತೆ ಪ್ರತಿಪಕ್ಷಗಳ ಹೋರಾಟದ ಕಿರಿಕಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.