ETV Bharat / state

ಸಿಎಂ ಪರ ಸಹಿ ಸಂಗ್ರಹ ಮಾಡಿದ್ದಾರೆ ಎಂಬುವುದು ಸುಳ್ಳು: ಶಾಸಕ ಪ್ರೊ. ಲಿಂಗಣ್ಣ - ಸಿಎಂ ಬಿಎಸ್​ವೈ ರಾಜೀನಾಮೆ

ಸಿಎಂ ಬಿಎಸ್​ವೈ ರಾಜೀನಾಮೆ ಹೇಳಿಕೆ ಬಳಿಕ ಶಾಸಕರಿಂದ ಸಹಿ ಸಂಗ್ರಹ ಮಾಡಲಾಗ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಪ್ರತಿಕ್ರಿಯಿಸಿದ್ದಾರೆ.

MLA Linganna Reaction
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ
author img

By

Published : Jun 8, 2021, 1:16 PM IST

ದಾವಣಗೆರೆ: ಸಿಎಂ ಪರ 65 ಜನ ಶಾಸಕರಿಂದ ಸಹಿ ಸಂಗ್ರಹ ಮಾಡಲಾಗಿದೆ ಎಂಬ ವಿಷಯ ಸುಳ್ಳು ಎಂದು ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರ ನೇತೃತ್ವದಲ್ಲಿ ರಚನೆಯಾದ ಸರ್ಕಾರ ಮುಂದಿನ ಎರಡು ವರ್ಷಗಳನ್ನು ಪೂರೈಸುತ್ತದೆ. ನಾವು ಸಿಎಂ ನೆರಳಿನಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದೇವೆ. ಸಿಎಂ ಪರ ಸಹಿ ಸಂಗ್ರಹ ಮಾಡಲಾಗಿದೆ ಎಂಬುವುದು ಸುಳ್ಳು. ಆ ಸುದ್ದಿಯನ್ನು ಯಾರೂ ನಂಬಲು ಹೋಗಬೇಡಿ ಎಂದರು.

ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ

ಚರ್ಚೆಗಳು ಸಾವಿರ ಆಗುತ್ತವೆ, ಚರ್ಚೆ ಆಗಬಾರದೆಂದು ಎಲ್ಲಾದರು ಇದ್ಯಾ? ಕೆಲವರಿಗೆ ಸಿಎಂ ಆಗಿ ಯಡಿಯೂರಪ್ಪ ಇರಲಿ ಎಂದಿರುತ್ತದೆ. ಇನ್ನು ಕೆಲವರಿಗೆ ಇರಲ್ಲ ಎಂದು ಹೇಳಿದರು.

ಓದಿ : ಸಿಎಂ ಯಾವ ಆ್ಯಂಗಲ್​ನಲ್ಲಿ ರಾಜೀನಾಮೆ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ: ಭೈರತಿ ಬಸವರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.