ETV Bharat / state

Karnataka rice row: 10 ಕೆಜಿ ಅಕ್ಕಿ ಕೊಡಲು ತಯಾರಿದ್ದೇವೆ, ಆದ್ರೆ ಕೇಂದ್ರದ ಅಸಹಕಾರ ನೀತಿಯಿಂದ ಸಾಧ್ಯವಾಗುತ್ತಿಲ್ಲ: ಸಚಿವ ಆರ್ ಬಿ ತಿಮ್ಮಾಪುರ - ಗೋ ಹತ್ಯೆ ನಿಷೇಧ ಕಾಯ್ದೆ

ನಾವು 10 ಕೆಜಿ ಅಕ್ಕಿ ಕೊಡಲು ಸಿದ್ಧರಿದ್ದೇವೆ. ಆದರೆ ಕೇಂದ್ರ ಸರ್ಕಾರ ಅಸಹಕಾರ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಕಿಡಿಕಾರಿದ್ದಾರೆ.

thimmapur
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡುತ್ತಿರುವುದು
author img

By

Published : Jun 22, 2023, 4:56 PM IST

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡುತ್ತಿರುವುದು

ದಾವಣಗೆರೆ: ಕೇಂದ್ರ ಸರ್ಕಾರ ಅಕ್ಕಿಯನ್ನು ಪುಕ್ಸಟ್ಟೆ ಕೊಡುವ ರೀತಿ ವರ್ತಿಸುತ್ತಿದೆ. ಇವರೆಲ್ಲ ಅದಾನಿ ಅಂಬಾನಿ ಜೊತೆ ಬೆಳೆದವರು, ಬಡವರ ಕಷ್ಟ ಇವರಿಗೆ ಅರ್ಥವಾಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10 ಕೆಜಿ ಅಕ್ಕಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ಆದರೆ ಕೇಂದ್ರದ ಅಸಹಕಾರದ ನೀತಿಯಿಂದ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

"ಆಹಾರ ಸಚಿವ ಹೆಚ್​ ಮುನಿಯಪ್ಪಗೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿರುವುದನ್ನು ನಾನು ಖಂಡಿಸುತ್ತೇನೆ. ಬಡವರ ಅನ್ನದ ಜೊತೆ ಆಟವಾಡುತ್ತಿರುವ ಈ ಪ್ರವೃತಿಯನ್ನು ನಾನು ಒಪ್ಪುವುದಿಲ್ಲ. 10 ಕೆಜಿ ಅಕ್ಕಿ ಕೊಡಲು ತಯಾರಿದ್ದೇವೆ. ರಾಜ್ಯದಲ್ಲಿ ಸ್ವಲ್ಪ ತೊಂದರೆಯಾಗಿದೆ. ಬೇರೆ ರಾಜ್ಯದವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಆಗುತ್ತದೆ" ಎಂದು ಭರವಸೆ ನೀಡಿದರು. ಬಳಿಕ ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹಾಲಿನ ದರ ಏರಿಕೆ ಬಗ್ಗೆ ಅದು ಏರಿಕೆಯಾದ ನಂತರವೇ ಮಾತನಾಡೋಣ. ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ ಅಷ್ಟೇ. ಅದು ಚರ್ಚೆಯಾಗುತ್ತದೆ. ಅಡ್ವಾನ್ಸ್ ಆಗಿ ನಾವು ಏನನ್ನು ಹೇಳುವುದಿಲ್ಲ" ಎಂದರು.

ಕೈಗಾರಿಕಾ ಬಂದ್ ಘೋಷಣೆ ವಿಚಾರವಾಗಿ ಮಾತನಾಡಿ, "ಸಹಜವಾಗಿ ತೆರಿಗೆ ತೆಗೆದುಕೊಳ್ಳಲೇಬೇಕು. ಕೆಲವು ವಿಚಾರವಾಗಿ ಟ್ಯಾಕ್ಸ್ ಕಡಿಮೆ, ಜಾಸ್ತಿ ಮಾಡುವುದು ಇದ್ದೇ ಇರುತ್ತೆ. ಒಂದು ಕೈಯಲ್ಲಿ ಕೊಟ್ಟು ಒಂದು ಕೈಯಲ್ಲಿ ಕಿತ್ತುಕೊಳ್ಳುತ್ತಾರೆ ಎಂಬುದು ಅವರವರ ಭಾವನೆಯಷ್ಟೇ. ಸದ್ಯಕ್ಕೆ ಮದ್ಯದ ದರ ಏರಿಕೆ ಮಾಡಿಲ್ಲ. ಅಬಕಾರಿ ಶುಲ್ಕವನ್ನೂ ಏರಿಕೆ ಮಾಡಿಲ್ಲ‌" ಎಂದು ತಿಳಿಸಿದರು. ಇನ್ನು ಸಿದ್ದರಾಮಯ್ಯನವರು ಪೂರ್ಣವಧಿಯವರೆಗೆ ಸಿಎಂ ಆಗಿ ಅಧಿಕಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "ಶಾಸಕಾಂಗ ಸಭೆ ಇದೆ, ಹೈಕಮಾಂಡ್ ಇದೆ ಅಲ್ಲಿ ನಿರ್ಧಾರವಾಗುತ್ತದೆ. ಈಗ ಏನ್ ಹೇಳ್ತಾ ಇದ್ದಾರೋ, ಅದು ಅವರ ವೈಯಕ್ತಿಕ. ಈ ಬಗ್ಗೆ ನಾನೇನು ಹೇಳುವುದಿಲ್ಲ" ಎಂದು ಹೇಳಿದರು.

ಬಳಿಕ ಬಿಜೆಪಿ ವಿರೋಧ ಪಕ್ಷ ಆಯ್ಕೆ ಮಾಡದ ವಿಚಾರವಾಗಿ ಪ್ರತಿಕ್ರಿಯಿಸಿ, "ಬಿಜೆಪಿಯವರು ಗೊಂದಲದಲ್ಲಿ ಇದ್ದಾರೆ. ಸೋಲಿನಿಂದ ಹತಾಶರಾಗಿದ್ದಾರೆ. ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನಾದರೂ ಮಾಡಬಹುದು. ಆದರೆ ಸೋಲಿನ ಹೊಣೆ ಹೊತ್ತಿಕೊಳ್ಳುವವರು ಯಾರು? ಎಂದು ಯೋಚನೆ ಮಾಡುತ್ತಿದ್ದಾರೆ" ಎಂದು ಟೀಕಿಸಿದರು. ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿ, "ಯಡಿಯೂರಪ್ಪನವರು ಒತ್ತಡದಲ್ಲಿ ಇದ್ದಾರೆ. ಯಾವ ಒತ್ತಡ ಅಂತ ಗೊತ್ತಿಲ್ಲ‌. ಆ ಪಕ್ಷದಲ್ಲಿ ಬಹಳ ಜನರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಯಡಿಯೂರಪ್ಪನವರು ಪ್ರವಾಸ ಮಾಡಬೇಕು ಅಂತ ಯಾಕೆ ಹೇಳ್ತಾ ಇದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದರು.

ಶೆಟ್ಟರ್​ ಬಗ್ಗೆ ಹೈಕಮಾಂಡ್​ ತೀರ್ಮಾನಿಸುತ್ತೆ: "ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಈಗ ತಾನೇ ಅಧಿಕಾರಕ್ಕೆ ಬಂದಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ 50 ಕೂಡ ಈಡೇರಿಕೆ ಮಾಡಿಲ್ಲ. ಯೋಗ್ಯತೆ ಇಲ್ಲದವರು ಈಗ ಮಾತನಾಡುತ್ತಿದ್ದಾರೆ. ಅವರು ಎಷ್ಟು ಭರವಸೆಗಳನ್ನು ಈಡೇರಿಕೆ ಮಾಡಿದ್ದಾರೆ ಹೇಳಿ. ಅಕ್ಕಿಗೆ ದುಡ್ಡು ಕೊಡ್ತೀವಿ ಅಂದ್ರೂ ಅಕ್ಕಿ ಕೊಡ್ತಿಲ್ಲ" ಎಂದು ಸಚಿವ ಆರ್​ ಬಿ ತಿಮ್ಮಾಪುರ ಗುಡುಗಿದರು.

ಗೋ ಹತ್ಯೆ ನಿಷೇಧ ಕಾಯ್ದೆ: ನಾವು ಯಾವ ಧರ್ಮದ ವಿಚಾರವಾಗಿ ಕೈ ಹಾಕುವುದಿಲ್ಲ. ಅವರವರ ಆಚರಣೆ ಸಂವಿಧಾನ ಬದ್ಧವಾಗಿದೆ. ಸಂವಿಧಾನ ವಿರೋಧಿ ನೀತಿಯನ್ನು ನಾವು ಅನುಸರಿಸುವುದಿಲ್ಲ. ಸಂವಿಧಾನಕ್ಕೆ ವಿರೋಧವಾದ ಕಾನೂನನ್ನು ತರಲು ಆಗುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್‌‌ನವರು ನಮ್ಮ ಮೈಂಡ್ ಹ್ಯಾಕ್ ಆಗಿದೆ, ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡ್ತಿದ್ದೇವೆ ಎನ್ನಬಹುದು: ಸಿ.ಟಿ.ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.