ETV Bharat / state

ಎಸ್ಟಿ ಮೀಸಲಾತಿಗಾಗಿ ಫೆ. 7ರಂದು ಬೆಂಗಳೂರಿನಲ್ಲಿ ಸಮಾವೇಶ; ಈಶ್ವರಪ್ಪ - ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸುದ್ದಿ

ರಾಜಕೀಯ ಒತ್ತಡವಿಲ್ಲದ ಹಿನ್ನೆಲೆ ಕುರುಬರಿಗೆ ಎಸ್​ಟಿ ಮೀಸಲು ದೊರೆತಿಲ್ಲ, ಹೋರಾಟದ ಮೂಲಕ ರಾಜಕೀಯ ಒತ್ತಡ ಹೇರುತ್ತಿದ್ದೇವೆ, ಎಸ್​ಟಿ ಅರ್ಹತೆ ಹೊಂದಿರುವ ಎಲ್ಲ ಸಮಾಜಗಳ ಪರ ಹೋರಾಟವಾಗಬೇಕು, ಸವಲತ್ತು ಪಡೆಯಲು‌ ಶಕ್ತಿ ಪ್ರದರ್ಶನ ಆಗಬೇಕು ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು.

Minister k.S Eshwarappa
ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ
author img

By

Published : Dec 31, 2020, 3:40 PM IST

ದಾವಣಗೆರೆ: ಎಸ್​ಟಿ ಮೀಸಲಾತಿಗಾಗಿ ಸಮಾಜದ ಸ್ವಾಮೀಜಿಗಳು ಹಮ್ಮಿಕೊಂಡಿರುವ ಪಾದಯಾತ್ರೆಯು ಫೆಬ್ರವರಿ 7 ರಂದು ಬೆಂಗಳೂರಿಗೆ ಬರಲಿದ್ದು, ಅಂದಿನ ಸಮಾವೇಶಕ್ಕೆ 10 ಲಕ್ಷ ಜನ ಕುರುಬ ಸಮಾಜ ಬಾಂಧವರು ಸೇರಲಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಎಸ್ಟಿ ಮೀಸಲಾತಿಗಾಗಿ ಫೆ. 7ಕ್ಕೆ ಬೆಂಗಳೂರಿನಲ್ಲಿ ಕುರುಬ ಸಮುದಾಯದ 10 ಲಕ್ಷ ಜನ ಸೇರಬೇಕು: ಈಶ್ವರಪ್ಪ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಕನಕ ಗುರುಪೀಠದಲ್ಲಿ ನಡೆದ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಒತ್ತಡವಿಲ್ಲದ ಹಿನ್ನೆಲೆ ಕುರುಬರಿಗೆ ಎಸ್​ಟಿ ಮೀಸಲು ದೊರೆತಿಲ್ಲ, ಹೋರಾಟದ ಮೂಲಕ ರಾಜಕೀಯ ಒತ್ತಡ ಹೇರುತ್ತಿದ್ದೇವೆ, ಎಸ್​ಟಿ ಅರ್ಹತೆ ಹೊಂದಿರುವ ಎಲ್ಲ ಸಮಾಜಗಳ ಪರ ಹೋರಾಟವಾಗಬೇಕು, ಸವಲತ್ತು ಪಡೆಯಲು‌ ಶಕ್ತಿ ಪ್ರದರ್ಶನ ಆಗಬೇಕು ಎಂದು ಸಭೆಯಲ್ಲಿ ಸೇರಿದ್ದ ಜನರಿಗೆ ಸಂದೇಶ ರವಾನಿಸಿದರು.

ಈ ಹೋರಾಟ ಯಾವುದೇ ಸಮಾಜದ ವಿರುದ್ಧದ ಹೋರಾಟವಲ್ಲ. ಮಾರ್ಚ್‌ ತಿಂಗಳಲ್ಲಿ ಒಡೆಯರ ಕುಲದವರಿಗೆ ರಾಜ್ಯಮಟ್ಟದ ಪ್ರತ್ಯೇಕ ಸಮಾವೇಶ ಮಾಡೋಣ, ಒಡೆಯರ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಪ್ರಯತ್ನ ಆಗಲಿ. ಅದರೊಂದಿಗೆ ಎಸ್ಟಿ ಮೀಸಲಾತಿ ದೊರೆಯುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಸರ್ಕಾರಕ್ಕೆ ಸಂದೇಶ ರವಾನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.