ದಾವಣಗೆರೆ : ನಮ್ಮ ಬಳಿ ನೂರಾರು ಜಾನುವಾರುಗಳಿವೆ. ಅವುಗಳನ್ನೆಲ್ಲಾ ಹಾಗೇ ಇಟ್ಟುಕೊಳ್ಳೋಕೆ ಆಗುತ್ತಾ ಎಂಬ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯವರ ಹೇಳಿಕೆಗೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದರು..
ನಗರದಲ್ಲಿ ನಡೆಯುತ್ತಿರುವ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಹೋರಾಟದ ಸಭೆಗೆ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತನ್ನದೆಯಾದ ಮಹತ್ವವಿದೆ. ಎಲ್ಲಾ ಪ್ರಾಣಿಗಳಿಗೆ ಗೋಮಾತೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ.
ಮನೆಯಲ್ಲಿ ಮಕ್ಕಳು ಜಾಸ್ತಿ ಇದ್ದಾರೆ ಎಂದು ಅವರನ್ನು ಕಡೆದು ಹಾಕಕ್ಕೆ ಆಗುತ್ತಾ..? ಮನೆಯಲ್ಲಿ 25 ಮಕ್ಕಳಿವೆ ಅಂತಾ ಸಾಕೋದಕ್ಕೆ ಆಗಲ್ಲ ಅಂದ್ರೇ ಹೇಗೆ ಅಂತಾ ಸಚಿವ ಈಶ್ವರಪ್ಪ ಅವರು ಹೊರಟ್ಟಿ ಅವರಿಗೆ ಮರು ಪ್ರಶ್ನೆ ಹಾಕಿದ್ದಾರೆ.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನ್ಯಾಪ್ ಕೇಸ್ : ಕಿಂಗ್ಪಿನ್ ಅರೆಸ್ಟ್
ನಿಮ್ಮ ಬಳಿ ನೂರಾರು ಜಾನುವಾರುಗಳಿದ್ರೆ ಅವುಗಳನ್ನು ಇಟ್ಟುಕೊಳ್ಳಲು ಆದ್ರೇ ಇಟ್ಕೊಳಿ, ಇಲ್ಲ ಅಂದ್ರೆ ಯಾರು ಸಾಕುತ್ತಿದ್ದಾರೋ ಅವರಿಗೆ ಕೊಡಿ. ಇಲ್ಲ ಅಂದ್ರೆ ಸರ್ಕಾರಿ ಗೋಶಾಲೆಗೆ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.