ಹರಿಹರ: ಮಾಸ್ಕ್ ಡೇ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಇಂದು ಕೊರೊನಾ ವೈರಸ್ ವಿರುದ್ಧ ಹೋರಾಡಲು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜನ ಜಾಗೃತಿ ಮೂಡಿಸಲಾಯಿತು.
ನಗರದಲ್ಲಿನ ಪಕ್ಷದ ಕಚೇರಿಯಿಂದ ಕಾಲ್ನಡಿಗೆ ಮೂಲಕ ಹೊರಟ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಶಿವಮೊಗ್ಗ ರಸ್ತೆ, ಕಿತ್ತೂರರಾಣಿ ಚೆನ್ನಮ್ಮ ವೃತ್ತ ಹಾಗೂ ಗಾಂಧಿ ವೃತ್ತದವರೆಗೆ ಸಂಚರಿಸಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಕೊರೊನಾ ವೈರಸ್‌ನಿಂದ ಪಾರಾಗಬಹುದು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
![Mask day](https://etvbharatimages.akamaized.net/etvbharat/prod-images/06:04:58:1592483698_kn-dvg-03-18-bjp-mask-dinacharani-kac10011_18062020174444_1806f_1592482484_947.jpg)
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ನಿಂದ ಪಾರಾಗಲು ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮುಖಕ್ಕೆ ಮಾಸ್ಕ್ ಧರಿಸುವುದು ಅನಿವಾರ್ಯ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈರಸ್ ತಡೆಗೆ ಹಲವಾರು ಮಾರ್ಗಸೂಚಿಗಳನ್ನು ನೀಡಿದ್ದು, ಅವುಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಅಜೀತ್ ಸಾವಂತ್ ಮಾತನಾಡಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಮಾಸ್ಕ್ ಬಳಸಿ ಸಾಮಾಜಿಕ ಸಂಬಂಧಗಳನ್ನು ಧೃಡಗೊಳಿಸೋಣ. ಸರ್ಕಾರದ ಮಾರ್ಗ ಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನೀತಾ ಮೆಹರ್‍ವಾಡೆ, ಅಶ್ವಿನಿ ಕೃಷ್ಣ, ದೂಡಾ ಸದಸ್ಯ ರಾಜು ರೋಖಡೆ, ಮುಖಂಡರಾದ ರಾಘವೇಂದ್ರ ಉಪಾದ್ಯಾಯ, ಆನಂದ್, ಮಂಜಾನಾಯ್ಕ್, ರಾಜೇಶ್ ವರ್ಣೇಕರ್, ಪ್ರವೀಣ್. ಜಿ.ಪವಾರ್, ಐರಣಿ ಮಂಜುನಾಥ್, ತುಳಜಪ್ಪ ಭೂತೆ, ಮೋತ್ಯಾನಾಯ್ಕ್, ರಾಚಪ್ಪ, ಪ್ರಶಾಂತ್ ಕುಮಾರ್, ಸುನೀಲ್ ಕುಮಾರ್, ಹಾಗೂ ಇತರರಿದ್ದರು.