ದಾವಣಗೆರೆ: ಮಂಗಳೂರು ಗಲಭೆ ಪ್ರಕರಣದಲ್ಲಿ ವಿಡಿಯೋಗಳನ್ನು ತಿರುಚಲಾಗಿದೆ ಎಂದು ದಾವಣಗೆರೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.
ಪೌರತ್ವ ಕಾಯ್ದೆಗೆ ನಮ್ಮ ವಿರೋಧವಿದೆ. ಅಷ್ಟೇ ಅಲ್ಲ, ಈ ಕಾಯ್ದೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ನಡೆಯುತ್ತಿರುವ ಗಲಭೆಗಳಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಇನ್ನೂ ವಿಡಿಯೋಗಳನ್ನು ತಿರುಚಲಾಗಿದೆ. ಬೇಕಾದರೆ ನನ್ನ ಕೈಗೂ ವಿಡಿಯೋಗಳನ್ನ ಕೊಡಿ, ಹೇಗೆ ಬೇಕು ಹಾಗೇ ಬದಲಾಯಿಸಿ ಕೊಡುತ್ತೇನೆ ಎಂದರು.
ಬಿಜೆಪಿಯವರು ಒಂದು ಸುಳ್ಳನ್ನು ಸೃಷ್ಟಿಸಿ ಅದನ್ನೇ ಹತ್ತು ಬಾರಿ ಹೇಳಿ ಸತ್ಯವಾಗಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.