ETV Bharat / state

ದಾವಣಗೆರೆಯಲ್ಲಿ ಹೆಚ್ಚುತ್ತಲೇ ಇವೆ ಪಾರಂಪರಿಕ ಚಿನ್ನದ ಆಸೆ ತೋರಿಸಿ ವಂಚಿಸುವ ಪ್ರಕರಣಗಳು.. ಒಬ್ಬ ವಂಚಕ ಅಂದರ್​​​​

ನಕಲಿ ಬಂಗಾರದ ಆಸೆಗೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲೇ ಅತಿ ಹೆಚ್ಚು ಮೋಸ ಹೋಗುತ್ತಿರುವುದು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಮೇಲಿಂದ ಮೇಲೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಜಿಲ್ಲೆಯ ಜನರು ಮೋಸ ಹೋಗುವುದು ಕಡಿಮೆಯಾಗಿಲ್ಲ.

Man held for selling fake gold coins in  Davangere
ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ: ಆರೋಪಿ ಅರೆಸ್ಟ್​​
author img

By

Published : Sep 30, 2022, 1:19 PM IST

Updated : Sep 30, 2022, 3:36 PM IST

ದಾವಣಗೆರೆ: ನಿಧಿ ಸಿಕ್ಕಿದ್ದು, ಪಾರಂಪರಿಕ ಚಿನ್ನದ ನಾಣ್ಯಗಳು ನಮ್ಮ‌ ಬಳಿ ಇದೆ ಎಂದು ಹಣ ಪಡೆದು ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚನೆ ಮಾಡಿರುವ ಪ್ರಕರಣಗಳು ದಾವಣಗೆರೆಯಲ್ಲಿ ಹೆಚ್ಚಾಗುತ್ತಿವೆ. ಪೊಲೀಸರು ಇಂತಹ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಿದರೂ ಜನ ಮೋಸ ಹೋಗುತ್ತಿರುವುದು ಕಡಿಮೆಯಾಗಿಲ್ಲ. ಇದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ನಾಣ್ಯದ ಆಸೆಗೆ ಬಿದ್ದು, ಕೇರಳ ಮೂಲದ ವ್ಯಕ್ತಿ ದಾವಣಗೆರೆಯಲ್ಲಿ 30 ಲಕ್ಷ ರೂ ಪಂಗನಾಮ ಹಾಕಿಸಿಕೊಂಡಿರುವ ಪ್ರಕರಣವನ್ನು ದಾವಣಗೆರೆ ಪೋಲಿಸರು ಭೇದಿಸಿದ್ದಾರೆ. ದಾವಣಗೆರೆ ನಗರದ ಪಿಬಿ ರಸ್ತೆಯ ಟಯೋಟಾ ಶೋರೂಂ ಬಳಿ ನಕಲಿ ಬಂಗಾರ ನೀಡಿ 30 ಲಕ್ಷ ಹಣ ಪಡೆದು ವಂಚನೆ ಮಾಡಲಾಗಿತ್ತು. ಕೇರಳದ ವೈನಾಡ್ ನಿವಾಸಿ ಮುರುಳಿಧರ್​ ವಂಚನೆಗೆ ಒಳಗಾದವರು.

ಪ್ರಕರಣದ ಬಗ್ಗೆ ಎಸ್​ಪಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿರುವುದು..

ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಡಿಸಿಆರ್‌ಬಿ ಪೊಲೀಸ್​ ತಂಡ ಬೆಂಗಳೂರು, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ತಿರುಗಾಡಿ ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಿತ್ತು.

ಒರ್ವ ದಾವಣಗೆರೆಗೆ ಬರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಿರೀಶ್ ಬಂಧಿತ ಆರೋಪಿ. ಆರೋಪಿಯಿಂದ 22 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ನಕಲಿ ಬಂಗಾರ ನಾಣ್ಯ ಪ್ರಕರಣದಲ್ಲಿ ಉಳಿದ ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್​ಪಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

Man held for selling fake gold coins in  Davangere
ನಕಲಿ ಬಂಗಾರದ ನಾಣ್ಯಗಳು

ದಾವಣಗೆರೆಯೇ ಹಾಟ್ ಸ್ಪಾಟ್: ವಿದ್ಯಾ ನಗರ ಠಾಣೆ, ಆರ್​ಎಂಸಿ ಯಾರ್ಡ್ ಪೊಲೀಸ್​ ಠಾಣೆ, ಕೆಟಿಜೆ‌ ನಗರ ಪೊಲೀಸ್​​ ‌ಠಾಣೆ, ಸಂತೆಬೆನ್ನೂರು, ಜಗಳೂರು, ಗಾಂಧಿ ನಗರ ಪೊಲೀಸ್​​ ‌ಠಾಣೆ ಹೀಗೆ ಹಲವು ಪೊಲೀಸ್​​ ಠಾಣೆಗಳಲ್ಲಿ ಬಂಗಾರ ನೀಡುವುದಾಗಿ ವಂಚನೆ ಮಾಡಿರುವ 10 ರಿಂದ 15 ಪ್ರಕರಣಗಳು ದಾಖಲಾಗಿವೆ. ಇದಲ್ಲದೇ, ಆಂಧ್ರ, ಮಹಾರಾಷ್ಟ್ರ, ಪುಣೆ, ತಮಿಳುನಾಡು ರಾಜ್ಯಗಳಿಂದ ಕರೆಸಿ ದಾವಣಗೆರೆಯಲ್ಲಿ ವಂಚನೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ಇತ್ತೀಚಿನ ಪ್ರಕರಣಗಳು:

  • ವಿದ್ಯಾನಗರ ಠಾಣೆಯ ವ್ಯಾಪ್ತಿಯಲ್ಲಿ ಪೂರ್ವ ಮುಂಬೈನ ಗುಲಾಬ್ ಚಂದ್ ಶೀತಲ್ ಪ್ರಸಾದ್ ಗುಪ್ತಾ ಎಂಬುವರು 7 ಲಕ್ಷ ಕಳೆದುಕೊಂಡಿದ್ದರು. ಪೂರ್ವ ಮುಂಬೈನ ಹರ್ಷದ್ ರಾಜ್ ಕುಮಾರ್ ಪಾಠಕ್, ಕರ್ನಾಟಕದ ರಮೇಶ್ ಹಾಗೂ ಮಹಾರಾಷ್ಟ್ರದ ನಾಸಿಕ್‌ನ ಅಮನ್ ಶೇಖ್ ಹಾಗೂ ಜೀಶಾನ್ ಶೇಖ್ ಸೇರಿ ಗುಲಾಬ್ ಚಂದ್ ಶೀತಲ್ ಪ್ರಸಾದ್ ಗುಪ್ತಾರವರಿಗೆ 7 ಲಕ್ಷ ಪಂಗನಾಮ ಹಾಕಿದ್ದರು.
  • ಇನ್ನು ಆರ್​ಎಂಸಿ ಯಾರ್ಡ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ದುರುಗಪ್ಪ ಎಂಬುವ ಮಂಗಳೂರು ಮೂಲದ ಸೆಕ್ಯುರಿಟಿ ಗಾರ್ಡ್ ವಿಜಯ್ ಕುಮಾರ್ ಎಂಬುವರಿಗೆ 2.50 ಲಕ್ಷ ವಂಚನೆ ಮಾಡಿದ್ದರು.
  • ಕೆಟಿಜೆ‌ ನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಬಟ್ಟೆ ಅಂಗಡಿಯ ಮಾಲೀಕ ನರಪತ್ ಸಿಂಗ್ ಎಂಬುವರಿಗೆ ಮಹಾರಾಷ್ಟ್ರ ಮೂಲದ ಮೂರು ಜನ ನಕಲಿ ಬಂಗಾರ ನೀಡಿ 5 ಲಕ್ಷ ರೂ. ಪಂಗನಾಮ ಹಾಕಿದ್ದರು.
  • ಸಂತೆಬೆನ್ನೂರು ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಹ್ಲಾದ್ ಎಂಬುವರಿಗೆ ಬಂಗಾರ‌ ನೀಡುವುದಾಗಿ ನಂಬಿಸಿ ಕರೆದು ಅವರ ಮೇಲೆ ಹಲ್ಲೆ ನಡೆಸಿ 7.50 ಲಕ್ಷ ನಗದು, ಒಂದು ಚಿನ್ನದ ಸರ, ಎರಡು ಚಿನ್ನದ ಉಂಗುರ ಹಾಗೂ ಮೊಬೈಲ್‌ ಕಸಿದು ಕಾಲ್ಕಿತ್ತಿದ್ದರು ಸಂತೆಬೆನ್ನೂರಿನ ಕುಳೆನೂರು ಗ್ರಾಮ ಬಳಿ ಈ ಘಟನೆ ನಡೆದಿತ್ತು.
  • ಇನ್ನು ಜಗಳೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬುನಾದಿ ತೆಗೆಯುವಾಗ ನಾಣ್ಯದ ನಿಧಿಸಿಕ್ಕಿದೆ ಎಂದು ನಂಬಿಸಿ ರಾಯಚೂರು ಮೂಲಕ ಗುತ್ತಿಗೆದಾರ ವೀರಣ್ಣ ಎಂಬುವರಿಗೆ 6 ಲಕ್ಷ ರೂ. ವಂಚಿಸಿದ್ದ ಆರೋಪಿಗಳಾದ ಪ್ರಕಾಶ್ (30), ಹನುಮಂತ(52) ಜಗಳೂರು ಪಟ್ಟಣ ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ: ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ

Last Updated : Sep 30, 2022, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.