ETV Bharat / state

ಬುಲೆರೋ ವಾಹನ ಹರಿದು ಯುವಕ ಸಾವು.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - Man died by Bulero accident in Davanagere

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಬುಲೆರೋ ವಾಹನವೊಂದು ಹರಿದು ಹೋಗಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ..

ಬುಲೆರೋ ವಾಹನ ಹರಿದು ಯುವಕ ಸಾವು
ಬುಲೆರೋ ವಾಹನ ಹರಿದು ಯುವಕ ಸಾವು
author img

By

Published : Apr 19, 2022, 7:34 PM IST

ದಾವಣಗೆರೆ : ಬುಲೆರೋ ವಾಹನವೊಂದು ಯುವಕನ ಮೇಲೆ ಹರಿದು ಆತ ಮೃತಪಟ್ಟಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀಕಾಂತ ಟಾಕೀಸ್ ಮುಂಭಾಗ ಜರುಗಿದೆ.

ಬುಲೆರೋ ವಾಹನ ಹರಿದು ಯುವಕ ಸಾವು..

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನವೀನ್ (20) ಎಂಬಾತ ಮೃತಪಟ್ಟ ಯುವಕ. ಇಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹರಿಹರ ನಗರದಿಂದ ಬಂದ ಬುಲೆರೋ ವಾಹನ ಪಾದಚಾರಿ ಮೃತ ನವೀನ್ ಮೇಲೆ ಹರಿದಿದೆ.

ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರ‌ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್‌ ಎಂಬಾತನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ವಾಹನ ಚಾಲಕನ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಓದಿ: ಐಸಿಯುನಲ್ಲಿ ಎರಡು ನವಜಾತ ಶಿಶುಗಳು ಸಾವು; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಕಂದಮ್ಮಗಳು ಬಲಿ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.