ದಾವಣಗೆರೆ : ದೇಶಾದ್ಯಂತ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬೆಣ್ಣೆನಗರಿಯಲ್ಲೂ ಶಿವನ ಆರಾಧನೆಯು ಶ್ರದ್ಧೆ- ಭಕ್ತಿಯಿಂದ ಜರುಗಿತು.
ಮಹಾ ಶಿವರಾತ್ರಿ ನಿಮಿತ್ತ ನಗರದ ಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಶಿವ ಲಿಂಗಕ್ಕೆ ಹಾಲು, ತುಪ್ಪದ ಅಭಿಷೇಕ ಸೇರಿದಂತೆ ನಾನಾ ಪೂಜಾ ವಿಧಿವಿಧಾನಗಳು ನೆರವೇರಿದವು. ಶಿವ ದೇಗುಲಗಳಲ್ಲಿ ಹಬ್ಬದ ವಾತಾವರಣ ಕಳೆಕಟ್ಟಿತ್ತು. ಆವರಗೊಳ್ಳದ ಆದಿ ದೈವ ಶ್ರೀಕನ್ನೇಶ್ವರ ಮಹಾಸ್ವಾಮಿಗೆ ವಿಶೇಷ ಪೂಜೆಯನ್ನು ಪುರೋಹಿತ ಶಶಿಧರಯ್ಯ ಮತ್ತು ವಿನಾಯಕ ಸ್ವಾಮಿ ನೆರವೇರಿಸಿದರು.