ETV Bharat / state

ಕಾಂಗ್ರೆಸ್​ಗೆ ಧಮ್ ಇದ್ರೆ ಲಿಂಗಾಯತ ಸಿಎಂ ಘೋಷಿಸಲಿ: ಸಂಸದ ಜಿ.ಎಂ.ಸಿದ್ದೇಶ್ವರ್

ಬಿಜೆಪಿಯವರು ಲಿಂಗಾಯತ ವಿರೋಧಿಗಳು ಎಂದು ದೂರುತ್ತಿರುವ ಕಾಂಗ್ರೆಸ್​ಗೆ ಸಂಸದ ಜಿ.ಎಂ.ಸಿದ್ದೇಶ್ವರ್​ ಸವಾಲು​ ಹಾಕಿದ್ದಾರೆ.

MP GM Siddeshwara talked to media
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿಎಂ ಸಿದ್ದೇಶ್ವರ್
author img

By

Published : Apr 20, 2023, 8:01 PM IST

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್

ದಾವಣಗೆರೆ: ಈ ಹಿಂದೆಯೂ ಕೂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಈಗಲೂ ಕೂಡ ಲಿಂಗಾಯತ ಸಿಎಂ ಬಗ್ಗೆ ಒಮ್ಮತದ ಅಭಿಪ್ರಾಯವಿದೆ. ಅದೇ ಕಾಂಗ್ರೆಸ್​ನಲ್ಲಿ ಧಮ್ ಇದ್ರೆ ಲಿಂಗಾಯತ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡಲಿ, ಮೊದಲು ಲಿಂಗಾಯತರನ್ನೇ ಸಿಎಂ ಮಾಡುವುದಾಗಿ ಘೋಷಣೆ ಮಾಡಿ ಚುನಾವಣೆಗೆ ಹೋಗಲಿ‌ ಎಂದು ಕೈ ನಾಯಕರಿಗೆ ಸಂಸದ ಜಿ.ಎಂ.ಸಿದ್ದೇಶ್ವರ್​ ಸವಾಲೆಸೆದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿಂದು ಮಾತನಾಡಿದ ಅವರು, ಲಿಂಗಾಯತರು ಬಿಜೆಪಿ ಬಿಟ್ಟು ಹೋಗಲ್ಲ. ಮತ್ತೆ 130 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ. ಬೊಮ್ಮಾಯಿ ಅವರೇ ಸಿಎಂ ಆಗಲಿದ್ದಾರೆ. ಕಾಂಗ್ರೆಸ್​ನವರು ಅವರನ್ನು ಇವರನ್ನು ಪಕ್ಷಕ್ಕೆ ಕರೆದುಕೊಂಡು ಟ್ರಂಪ್ ಕಾರ್ಡ್ ಮಾಡ್ತಿದ್ದಾರೆ. ಇದೇ ತಿಂಗಳು 24 ರ ನಂತರ ದಾವಣಗೆರೆಯಲ್ಲಿ ರಾಷ್ಟ್ರೀಯ ನಾಯಕರ ಪ್ರವಾಸ ಇತ್ತು. ಆದರೆ 22ರಂದು ಮುಸ್ಲಿಮರ ಹಬ್ಬ ಇರುವುದರಿಂದ ಅದನ್ನು ಮುಂದೂಡಲಾಗಿದೆ ಎಂದರು.

ನಾನು ಈಗಾಗಲೇ ಪ್ರತಿ ಕ್ಷೇತ್ರದಲ್ಲಿಯೂ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಕೆಲವರು ಸುಳ್ಳು, ಅಪಪ್ರಚಾರ ಮಾಡ್ತಿದ್ದಾರೆ. ಕಾಂಗ್ರೆಸ್​ನವರು ಭ್ರಮೆಯಲ್ಲಿದ್ದಾರೆ. ನಾವು ದಾವಣಗೆರೆಯ ಏಳು ಕ್ಷೇತ್ರಗಳನ್ನೂ ಗೆಲ್ಲಲಿದ್ದೇವೆ. ದಾವಣಗೆರೆ ಉತ್ತರ ದಕ್ಷಿಣದಲ್ಲಿ ಬಂಡಾಯ ಶಮನ ಮಾಡಿದ್ದು, ಮಾಯಕೊಂಡದಲ್ಲಿ ಬಂಡಾಯವಿದೆ ಅದನ್ನೂ ಶಮನ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.