ETV Bharat / state

ದಾವಣಗೆರೆ ಬಳಿ ಚಿರತೆ ಹಾವಳಿ..ಭಯದಲ್ಲಿ ದೊಣ್ಣೆ ಕುಡಗೋಲು ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು - ಚಿರತೆ ದಾಳಿಗೆ ಮಹಿಳೆ ಬಲಿ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಇನ್ನು ಅರಣ್ಯ ಇಲಾಖೆ ಚಿರತೆ ಸೆರಗೆ ಕೂಂಬಿಂಗ್ ನಡೆಸಿದೆ.

ದಾವಣಗೆರೆ ಬಳಿ ಚಿರತೆ ಹಾವಳಿ
ದಾವಣಗೆರೆ ಬಳಿ ಚಿರತೆ ಹಾವಳಿ
author img

By

Published : Aug 25, 2022, 11:18 AM IST

Updated : Aug 25, 2022, 1:35 PM IST

ದಾವಣಗೆರೆ: ಜಿಲ್ಲೆಯ ನ್ಯಾಮತಿ ಭಾಗದಲ್ಲಿ ಕೂಲಿ‌ನಾಲಿ‌ ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳೇ ಹೆಚ್ಚು, ಜಮೀನುಗಳಿಗೆ ಕೂಲಿಗೆ ಹೋದರೆ ಮಾತ್ರವೇ ಅವರ ಜೀವನ‌ ಸಾಗುವುದು. ಆದರೆ, ಅದೇ ಕೂಲಿ ಮಾಡ್ತಿದ್ದಾ ಬಡ ಮಹಿಳೆಯನ್ನು ಚಿರತೆ ಬಲಿ ಪಡೆದಿದೆ. ಚಿರತೆ ಭಯದಿಂದ ಇಡೀ ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದಾರೆ.

ಚಿರತೆ ದಾಳಿಗೆ ಮಹಿಳೆ ಬಲಿ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಚಿರತೆಗೆ ಬಡಜೀವವೊಂದು ಬಲಿಯಾಗಿದೆ. ಕೂಲಿ ಮಾಡುತ್ತಿದ್ದಾಗ ಚಿರತೆ ದಾಳಿ ಮಾಡಿದ ಹಿನ್ನೆಲೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಗ್ರಾಮದ ಜಮೀನುಗಳಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಿದ್ದು, ಕಳೆದ ದಿನದಂದು ಹತ್ತಕ್ಕೂ ಹೆಚ್ಚು ಮಹಿಳೆಯರು ಮೆಕ್ಕೆಜೋಳದ ಜಮೀನೊಂದರಲ್ಲಿ ಕಳೆ ತೆಗೆಯುಲು ಹೋಗಿದ್ದರು. ಕಳೆ ತೆಗುವ ವೇಳೆ ಚಿರತೆ ದಾಳಿಗೆ ಕಮಲಬಾಯಿ ಎನ್ನುವ ಮಹಿಳೆ ಬಲಿಯಾಗಿದ್ದರು.

ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕ: ಘಟನೆಯಿಂದ ಇಡೀ ಫಲವನಹಳ್ಳಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಚಿರತೆ ಭಯದಿಂದ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕ್ತಿದ್ದಾರೆ. ಇನ್ನು ಕೆಲವರು ಜಮೀನಿಗೆ ತೆರಳಲು ಕೂಡ ಭಯಪಡುವಂತಾಗಿದೆ. ಗಾಬರಿಗೊಂಡ ಸ್ಥಳೀಯ ಕೂಲಿಕಾರರು ಮೊದಲು ಚಿರತೆ ಹಿಡಿಯುವಂತೆ ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವರು ಕೈಯಲ್ಲಿ ದೊಣ್ಣೆ ಕುಡುಗೊಲು ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.

ದಾವಣಗೆರೆ ಬಳಿ ಚಿರತೆ ಹಾವಳಿ

ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲ‌ ತಿಂಗಳುಗಳ ಹಿಂದೆಯೇ ಚಿರತೆ ಹಾವಳಿ ಇದೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಆ ನಿರ್ಲಕ್ಷ್ಯದ ಕಾರಣವೇ ಒಂದು ಜೀವ ಬಲಿಯಾಗಿದೆ ಎಂದು ಗ್ರಾಮಸ್ಥ ಭೀಮಾನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

ಚಿರತೆ ಸೆರೆಗೆ ಕೂಂಬಿಂಗ್: ಸಿಸಿಎಫ್ ಹೀರಾಲಾಲ್ ನೇತೃತ್ವದ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಾಲ್ಕೈದು ಬೋನ್​ ಅಳವಡಿಸಿ ಚಿರತೆ ಸೆರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಚಿರತೆ ಬೋನಿಗೆ ಬೀಳದಿದ್ದರೆ ದ್ರೋಣ್ ಬಳಕೆ ಮಾಡಲು ಚಿಂತನೆ‌ ನಡೆಸಲಾಗಿದೆ. ಅಲ್ಲದೇ ಕಿಲೋಮೀಟರ್​ಗೆ ಒಂದರಲ್ಲಿ ಐದು ಬೋನ್ ಇಡಲು ಕೂಡ ಚಿಂತನೆ ನಡೆಸಿದ್ದು, ಕೂಂಬಿಂಗ್ ಕಾರ್ಯಾಚರಣೆ ಕೂಡ ನಡೆಯುತ್ತಿದೆ.

ಅಲ್ಲದೇ ಚಿರತೆಯ ಚಲನವಲನಗಳನ್ನು ಕಂಡು ಹಿಡಿಯಲು ಕ್ಯಾಮರಾಗಳನ್ನು ಅಳವಡಿಕೆ ಮಾಡಿಲಾಗಿದೆ. ಈಗಾಗಲೇ ಮೃತ ಮಹಿಳೆಗೆ ಪರಿಹಾರ ನೀಡ ಇಲಾಖೆ ಕ್ರಮ ವಹಿಸುತ್ತದೆ. ಜನರು ಏಕಾಂಗಿಯಾಗಿ ಓಡಾಡುವುದನ್ನು ನಿಲ್ಲಿಸಬೇಕು, ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸಿಸಿಎಫ್ ಹೀರಾಲಾಲ್ ಅವರು ಜನರಿಗೆ ಸೂಚನೆ ನೀಡಿದರು.

ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ನಾನಾ ಕಸರತ್ತು ನಡೆಸುತ್ತಿದ್ದು, ಇದೇ ಕೆಲಸವನ್ನು ಜನರು ಮನವಿ ನೀಡಿದಾಗ ಮಾಡಿದ್ದರೆ ಒಂದು ಬಡ ಜೀವವಾದ್ರು ಉಳಿಯುತ್ತಿತ್ತು. ಏನೇ ಆಗಲಿ ಚಿರತೆ ದಾಳಿಗೆ ಬಲಿಯಾದ ಕೂಲಿ ಕಾರ್ಮಿಕ ಮಹಿಳೆಗೆ ಅರಣ್ಯ ಇಲಾಖೆ ಪರಿಹಾರ ನೀಡಲಿದ್ದು, ಇನ್ನು‌ ಮುಂದಾದರೂ ಜನರು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.

(ಇದನ್ನೂ ಓದಿ: ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆ.. ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ 2 ಆನೆಗಳ ಆಗಮನ)

Last Updated : Aug 25, 2022, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.