ETV Bharat / state

ಅಪಘಾತದ ಬಾಕಿ ಪರಿಹಾರ ಮೊತ್ತ ನೀಡದ ಕೆಎಸ್​ಆರ್​ಟಿಸಿ.. ದಾವಣಗೆರೆಯಲ್ಲಿ ಎರಡು ಬಸ್ ಜಪ್ತಿ - ಈಟಿವಿ ಭಾರತ ಕನ್ನಡ

ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ ಪೂರ್ಣ ಮೊತ್ತದ ಪರಿಹಾರ ಪಾವತಿಸಿದ ಹಿನ್ನೆಲೆ ಕೆಎಸ್​ಆರ್​ಟಿಸಿ ಬಸ್​ ಜಪ್ತಿ ಮಾಡಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ ಜಪ್ತಿ
ಕೆಎಸ್​ಆರ್​ಟಿಸಿ ಬಸ್​ ಜಪ್ತಿ
author img

By ETV Bharat Karnataka Team

Published : Sep 12, 2023, 3:41 PM IST

ದಾವಣಗೆರೆ: ಅಪಘಾತ ಪ್ರಕರಣವೊಂದರಲ್ಲಿ ಬಾಕಿ ಪರಿಹಾರ ಮೊತ್ತ ನೀಡದ ಹಿನ್ನೆಲೆ ಸೋಮವಾರ ನ್ಯಾಯಾಲಯದ ಆದೇಶದ ಮೇರೆಗೆ ಎರಡು ವಾಯುವ್ಯ ಕರ್ನಾಟಕ ಸಾರಿಗೆ ಬಸ್​ಗಳನ್ನು ಜಪ್ತಿ ಮಾಡಲಾಯಿತು. ಇಲ್ಲಿನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಹಾವೇರಿ ಡಿಪೋಗೆ ಸೇರಿದ ಎರಡು ಬಸ್‍ಗಳನ್ನು ನ್ಯಾಯಾಂಗ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೊಡಬೇಕಿದ್ದ ಪರಿಹಾರದ ಬಾಕಿ ಮೊತ್ತ ಉಳಿಸಿಕೊಂಡಿರುವ ಕೆಎಸ್​ಆರ್​ಟಿಸಿ ಸಂಸ್ಥೆಯ ಚರಾಸ್ತಿ ಜಪ್ತಿಗೆ ದಾವಣಗೆರೆ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಆದೇಶಿಸಿತ್ತು.

2013ರಲ್ಲಿ ತುಮಕೂರು ಟೋಲ್ ಬಳಿ ಹಾವೇರಿ ಡಿಪೋಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿಗೆ ತೆರಳುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಸಂಜೀವ್ ಎಂ ಪಾಟೀಲ್ ಮೃತಪಟ್ಟಿದ್ದರು. ಇವರ ಪತ್ನಿ ಗೌರಿ ಪಾಟೀಲ್‍ಗೆ 2,82,42,885 (ಎರಡು ಕೋಟಿ 82 ಲಕ್ಷ, 42 ಸಾವಿರದ 885) ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ ಪರಿಹಾರ ಮೊತ್ತವನ್ನು ಪೂರ್ಣವಾಗಿ ನೀಡಲು ಸತಾಯಿಸುತ್ತಿರುವ ಕೆಎಸ್​ಆರ್​ಟಿಸಿ ಸಂಸ್ಥೆಯು ಈವರೆಗೆ 2.20 ಕೋಟಿ ರೂ. ಮಾತ್ರವೇ ಪಾವತಿಸಿದೆ. 2016ರ ನಂತರದ ಬಡ್ಡಿ ಮೊತ್ತ ಸೇರಿದಂತೆ ಇನ್ನೂ 1 ಕೋಟಿಯಷ್ಟು ಹಣವನ್ನು ಮೃತರ ವಾರಸುದಾರರಿಗೆ ಕೆಎಸ್​ಆರ್​ಟಿಸಿ ನೀಡಬೇಕಿದೆ ಎಂದು ಗೌರಿ ಎಂಬುವರ ತಂದೆ ಕಿರುವಾಡಿ ಸೋಮಶೇಖರ್ ತಿಳಿಸಿದರು.

ಹುಬ್ಬಳ್ಳಿಯಲ್ಲೂ ಇಂತಹದ್ದೇ ಘಟನೆ: ನವಲಗುಂದ - ಹುಬ್ಬಳ್ಳಿಯ ಬಳಿ ಸಂಭವಿಸಿದ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬುವವರು ಮೃತಪಟ್ಟಿದ್ದರು. ಮೃತ ಚಾಲಕನ ತಾಯಿ ನಗರದ ಎರಡನೇ ಹಿರಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಕೆಎಸ್​ಆರ್​ಟಿಸಿ ಸಂಸ್ಥೆಗೆ 28 ಲಕ್ಷ ಪರಿಹಾರ ಅದಕ್ಕೆ ಶೇ. 6ರಷ್ಟು ಬಡ್ಡಿ ಸೇರಿಸಿ ನೀಡುವಂತೆ ಸಂಸ್ಥೆಗೆ ಸೂಚಿಸಿತ್ತು. ಆದರೆ, ಸಾರಿಗೆ ಸಂಸ್ಥೆ ವಾರೆಂಟ್ ನೀಡಿದರೂ ಪರಿಹಾರ ನೀಡಿರಲಿಲ್ಲ. ಜಪ್ತಿ ವಾರಂಟ್ ಅನ್ವಯ ನ್ಯಾಯಾಲಯದ ಸಿಬ್ಬಂದಿ ಕೆಎಸ್​ಆರ್​ಟಿಸಿಗೆ ಸೇರಿದ ಐರಾವತ ಬಸ್​ಅನ್ನು ಜಪ್ತಿ ಮಾಡಿ ಕೋರ್ಟ್​ ಎದುರು ನಿಲ್ಲಿಸಿದ್ದರು.

ಮತ್ತೊಂದೆಡೆ ಹರಿಹರದಲ್ಲಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿ ಅದರಲ್ಲಿದ್ದ ಪ್ರಯಾಣಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ವ್ಯಕ್ತಿಗೆ ಪರಿಹಾರ ನೀಡುವಂತೆ ಹಿರಿಯ ಸಿವಿಲ್​ ನ್ಯಾಯಾಲಯ ಸೂಚಿಸಿತ್ತು. ಪರಿಹಾರದ ಮೊತ್ತ ನೀಡಲು ವಿಳಂಬವಾದ ಹಿನ್ನೆಲೆ ನ್ಯಾಯಾಲಯದ ಸಿಬ್ಬಂದಿ ಗದಗ ಡಿಪೋಗೆ ಸೇರದ ಬಸ್ ಅನ್ನು ನಿಲ್ದಾಣದಲ್ಲಿ ಜಪ್ತಿ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್​ 2ರಲ್ಲಿ ವಿದೇಶಿ ವಿಮಾನ ಹಾರಾಟ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.