ETV Bharat / state

ಯಾವನೋ ಕುಡಿದು ಹೇಳಿಕೆ ನೀಡಿದರೆ ಅದನ್ನು ಕೇಳೋಕೆ ಆಗುತ್ತಾ? ಯತ್ನಾಳ್​ಗೆ ಸಚಿವ ಈಶ್ವರಪ್ಪ ಟಾಂಗ್​​ - Yatnal Statement 2020

ಸಿಎಂ ಯಡಿಯೂರಪ್ಪ ಐದು ತಿಂಗಳಿನಿಂದ ಅನಾರೋಗ್ಯದಿಂದ ಕಚೇರಿ ಕೆಲಸ ಮಾಡುತ್ತಿಲ್ಲ ಎಂಬ ಶಾಸಕ ಯತ್ನಾಳ್​ ಹೇಳಿಕೆಗೆ ಸಚಿವ ಈಶ್ವರಪ್ಪ ಕೆಂಡಾಮಂಡಲರಾದರು.

KS Eshwarappa reaction about MLA Basanagouda Yatnal Statement
ಸಚಿವ ಈಶ್ವರಪ್ಪ
author img

By

Published : Dec 31, 2020, 4:26 PM IST

Updated : Dec 31, 2020, 5:39 PM IST

ದಾವಣಗೆರೆ: ಯಾವನೋ ಕುಡಿದು ಹೇಳಿಕೆ ನೀಡಿದ್ರೆ ಅದನ್ನು ಕೇಳೋಕೆ ಆಗುತ್ತಾ? ನಮ್ಮವನೇ ಆಗಿರಲಿ, ಬೇರೆ ಯಾರೇ ಆಗಿರಲಿ, ಸಿಎಂ ಬಿಎಸ್​ವೈ ಕೆಲಸ ಮಾಡಲ್ಲ, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಶಾಸಕ ಯತ್ನಾಳ್​ ಹೇಳಿಕೆಗೆ ಸಚಿವ ಕೆಎಸ್ ಈಶ್ವರಪ್ಪ ಈ ರೀತಿ ತಿರುಗೇಟು ನೀಡಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಶಾಖಾ ಮಠದಲ್ಲಿ ಮಾತನಾಡಿದ ಅವರು, ಸಿಎಂ ಐದು ತಿಂಗಳಿನಿಂದ ಅನಾರೋಗ್ಯದಿಂದ ಕಚೇರಿ ಕೆಲಸ ಮಾಡುತ್ತಿಲ್ಲ ಹೇಳಿಕೆಗೆ ಈಶ್ವರಪ್ಪ ಕೆಂಡಾಮಂಡಲರಾದರು.

ಇದನ್ನೂ ಓದಿ : ಯತ್ನಾಳ್ ಅವರಂಥ ಶಾಸಕರ ನಡವಳಿಕೆಗಳು ಪಕ್ಷಕ್ಕೆ ಗೌರವ ತರುವಂಥದ್ದಲ್ಲ: ಸದಾನಂದಗೌಡ

ಎಸ್​ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂಬ ಹೇಳಿಕೆಯನ್ನು ಬಿಜೆಪಿ ಸರ್ಕಾರ ಸಿರಿಯಸ್ಸಾಗಿ‌ ತೆಗೆದುಕೊಂಡಿದೆ. ಎಸ್​ಡಿಪಿಐನ ಅಹಂಕಾರ ಮತ್ತು ಸೊಕ್ಕು ಇನ್ನು ಕಡಿಮೆಯಾಗಿಲ್ಲ. ಈ ಹಿಂದಿನ ಸರ್ಕಾರಗಳು ನೀಡಿದ ಬೆಂಬಲದಿಂದ ಅವರಿಗೆ ಸೊಕ್ಕು ಬಂದಿದೆ.

ಸಚಿವ ಕೆಎಸ್ ಈಶ್ವರಪ್ಪ

ಬರೀ ನಾಲ್ಕೇ ನಾಲ್ಕು ಸೀಟು ಗೆದ್ದಿರೋ‌ ಎಸ್​ಡಿಪಿಐ ಈ ರೀತಿ ಕೂಗಿರೋದು ದೇಶಕ್ಕೆ ಮಾಡಿದ ಅವಮಾನ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ನಾಲ್ವರ ಮೇಲೆ ಎಫ್​ಐಆರ್​ ಹಾಕಲಾಗಿದೆ. ಉಳಿದಂತೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Last Updated : Dec 31, 2020, 5:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.