ದಾವಣಗೆರೆ: ಬಿಜೆಪಿಯವರು ಜನಸೇವಕ್ ಸಮಾವೇಶ ಮಾಡುವ ಬದಲು ಜನದ್ರೋಹಿ ಸಮಾವೇಶ ಮಾಡಬಹುದಿತ್ತು ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಜನರ ಹೆಸರಿನಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಲೂಟಿ ಹೊಡೆಯುತ್ತಿದ್ದರಿಂದ ಇವರು ಜನ ಸೇವಕರಲ್ಲ ಜನದ್ರೋಹಿಗಳೆಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡುತ್ತಿದ್ದು, ರಾಜ್ಯದಲ್ಲಿ ಕೆಟ್ಟ ಆಡಳಿತ ನೀಡುತ್ತಿದೆ. ಬಿಜೆಪಿಯವರು ಕೋಟಿಗಾಗಿ ಹಣ ಹೂಡಿಕೆ ಮಾಡುತ್ತಿದ್ದಾರೆ ವಿನಃ ಜನರಿಗಾಗಿ, ಅಭಿವೃದ್ಧಿಗಾಗಿ ಮಾಡುತ್ತಿಲ್ಲ. ಜಿಲ್ಲೆಗೆ ಹತ್ತು ಜನ ಮಂತ್ರಿಗಳು ಬಂದು ಹೋಗ್ತಾರೆ ಆದ್ರೆ, ಜಿಲ್ಲೆ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಅಂತಾ ಅಸಮಾಧಾನ ಹೊರಹಾಕಿದ್ರು. ನಮ್ಮದೆ ಜಿಲ್ಲೆಗೆ ಸೇರಿದ ಒಬ್ಬ ಮಂತ್ರಿಯೂ ಇಲ್ಲದಿರುವುದು ನಾಚಿಕೆಗೇಡು ಎಂದ್ರು.
ಜಿಎಂ ಸಿದ್ದೇಶ್ವರ್ ರವರ ಕೈಯಲ್ಲಿ ಒಂದೂವರೆ ವರ್ಷದಿಂದ ಒಬ್ಬ ಮಂತ್ರಿ ಕರೆತರಲು ತರಲು ಆಗಲಿಲ್ಲ, ನಮ್ಮ ಜಿಲ್ಲೆಯವರಲ್ಲೇ ಒಬ್ಬರು ಮಂತ್ರಿ ಆದ್ರೆ ನನಗೆ ತೊಂದರೆ ಆಗುತ್ತೆ ಎಂದು ಅಡ್ಡಗಾಲು ಹಾಕುವ ಉದ್ದೇಶ ಸಂಸದ ಜಿಎಂ ಸಿದ್ದೇಶ್ವರ್ ಅವರಿಗಿರಬಹುದು ಎಂದು ಆರೋಪಿಸಿದ್ರು. ಜಿಲ್ಲೆಯಲ್ಲಿ ಆರು ಜನ ಬಿಜೆಪಿಯಿಂದ ಶಾಸಕರು ಗೆದ್ದಿದ್ದಾರೆ ಆದ್ರೂ ಮಂತ್ರಿ್ಗಳನ್ನು ತರಲು ಸಾಧ್ಯವಾಗಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು .
ಇದನ್ನೂ ಓದಿ:ದೇಶದ ಜನರಿಗೆ 'ಕೊರೊನಾ ವ್ಯಾಕ್ಸಿನ್' ಉಚಿತವಾಗಿ ಸಿಗಲಿ: ಟ್ವೀಟ್ ಮೂಲಕ ಕೇಜ್ರಿವಾಲ್ ಮನವಿ!