ETV Bharat / state

ಹರಿಹರದಲ್ಲಿ ಕೊರೊನಾ ಸೋಂಕಿತರ ದೈವ ಡಾ. ವಿಶ್ವನಾಥ ಕುಂದಗೋಳಮಠ

author img

By

Published : Aug 24, 2020, 11:32 PM IST

ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಹರಿಹರ ತಾಲೂಕಿನ ಡಾ. ವಿಶ್ವನಾಥ ಕುಂದಗೋಳಮಠ ಕೊರೊನಾ ಚಿಕಿತ್ಸೆ್ಗೆ ಬರುವ ರೋಗಿಗಳಿಗೆ ಮೊದಲು ಕೌನ್ಸಿಲಿಂಗ್​ ಮಾಡಿ ಧೈರ್ಯ ಹೇಳುವ ಮೂಲಕ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಿ ಅವರು ಬೇಗ ಗುಣಮುಖರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

kovid worrier dr. vishwanath kundagol news
ಡಾ.ವಿಶ್ವನಾಥ್ ಕುಂದಗೋಳ್‌ಮಠ

ಹರಿಹರ : ಕೊರೊನಾ ಶಬ್ದ ಕೇಳಿದರೆ ಜನ ಸಾಮಾನ್ಯರ ಎದೆ ಝಲ್ ‌ಎನ್ನುತ್ತದೆ. ಸಾಮಾನ್ಯ ಜನರನ್ನು ಬಿಟ್ಟು ಬಿಡಿ.. ಹಲವು ವೈದ್ಯರು ಸಹ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೆಲವು ವೈದ್ಯರು ರಾಜೀನಾಮೆ ನೀಡಿದ್ದಾರೆ.

ಇಂತಹ ಸೂಕ್ಷ್ಮ ಸಮಯದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ವೈದ್ಯರು ಹಲವರಿದ್ದಾರೆ. ಇಂಥವರ ಪೈಕಿ ಹರಿಹರದ ಗುತ್ತೂರಿನ ಕೋವಿಡ್ ‌ಕೇರ್ ಸೆಂಟರ್‌ನ ಮುಖ್ಯಸ್ಥ ಡಾ. ವಿಶ್ವನಾಥ ‌ಕುಂದಗೋಳ್‌ಮಠ ಒಬ್ಬರು. ಜುಲೈ 13ರಿಂದ ಈ ಕೇಂದ್ರ ಆರಂಭವಾಗಿದ್ದು ಆಗಿನಿಂದಲಲೇ ಇವರು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕೇಂದ್ರದಲ್ಲಿ 130 ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ.

ಮನೋಬಲವೇ ಮಹಾಬಲ:
ಡಾ. ವಿಶ್ವನಾಥ್‌ರವರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಕೆಲವು ನಿಮಿಷಗಳವರೆಗೆ ಕೌನ್ಸಿಲಿಂಗ್ ಮಾಡುತ್ತಾರೆ. ಕೊರೊನಾ ಕಾಯಿಲೆ ಎಂದರೆ ಏನು, ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು, ಕೈಗೊಳ್ಳಬೇಕಾದ ಎಚ್ಚರಿಕೆಗಳೇನು ಎಂಬುದನ್ನು ವಿವರಿಸಿ ರೋಗಿಗಳಿಗೆ ಮನೋಬಲವನ್ನು ತುಂಬುತ್ತಾರೆ.

ಆತ್ಮ ವಿಶ್ವಾಸ ಹೆಚ್ಚಳ:
ನಂತರ ರೋಗಿಗಳ ಸ್ಥಿತಿಗತಿಯನ್ನಾಧರಿಸಿ ಅವರಿಗೆ ಚಿಕಿತ್ಸೆ ನೀಡಲು ಆರಂಭಿಸುತ್ತಾರೆ. ವಿಶ್ವನಾಥ್‌ ರೋಗಿಯ ಜೊತೆಗೆ ಹೆಚ್ಚು ಮಾತನಾಡುತ್ತಾರೆ. ಮಕ್ಕಳಂತೆ ರೋಗಿಗಳ ಜೊತೆಗೆ ಬೆರೆಯುತ್ತಾರೆ. ಅವರ ಕಷ್ಟ, ಸುಖವನ್ನು ಕಾಳಜಿಯಿಂದ ಆಲಿಸುತ್ತಾರೆ.

ಸರಕಾರದಿಂದ ಕೊಡ ಮಾಡುವ ಸೀಮಿತ ಸೌಲಭ್ಯಗಳಲ್ಲೇ ರೋಗಿಗಳ ಅಗತ್ಯಗಳನ್ನು ಪೊರೈಸಲು ಇವರು ಶ್ರಮಿಸುತ್ತಿದ್ದಾರೆ. ಆಗಾಗ್ಗೆ ರೋಗಿಗಳ ಬಿ.ಪಿ., ಇಸಿಜಿ ತಪಾಸಣೆ ಮಾಡಿಸುತ್ತಾರೆ. ಹೆಚ್ಚಿನ ಚಿಕಿತ್ಸೆಅಗತ್ಯವಿದ್ದರೆ, ಅವರಿಗೆ ಹರಿಹರ ಅಥವಾ ದಾವಣಗೆರೆ ಕೋವಿಡ್ ‌ಆಸ್ಪತ್ರೆಗೆ ಸಾಗಿಸುತ್ತಾರೆ.

ತುಂಬ ಹೆದರಿಕೆ, ಏಕತಾನತೆ ಹೊಂದಿದ ರೋಗಿ ಇದ್ದರೆ ಅಂಥವರೊಂದಿಗೆ ಚರ್ಚಿಸಿ, ಅವರಿಗೆ ಧೈರ್ಯ ತುಂಬುತ್ತಾರೆ. ಮನಸ್ಸು ಗಟ್ಟಿಗೊಳಿಸುತ್ತಾರೆ. ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.