ETV Bharat / state

ಹರಿಹರದಲ್ಲಿ ಮದ್ಯ ಮಾರಾಟ ನಿಲ್ಲಿಸುವಂತೆ ಕರವೇ ಮನವಿ - Harihara news

ದಾವಣಗೆರೆಯಿಂದ ಜನರು ಮದ್ಯ ಖರೀದಿಸಲು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಪೊಲೀಸ್ ಅಧಿಕಾರಿಗಳಿಗೆ ಇವರನ್ನು ತಡೆಯಲು ಸಹ ಸೂಚಿಸಲಾಗಿದೆ.

Harihara
ಮದ್ಯೆ ಮಾರಾಟ ನಿಲ್ಲಿಸುವಂತೆ ಕರವೆ ಮನವಿ
author img

By

Published : May 9, 2020, 9:32 PM IST

ಹರಿಹರ: ದಾವಣಗೆರೆಯಿಂದ ಜನರು ಮದ್ಯ ಖರೀದಿಸಲು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಪೊಲೀಸ್ ಅಧಿಕಾರಿಗಳಿಗೆ ಇವರನ್ನು ತಡೆಯಲು ಸಹ ಸೂಚಿಸಲಾಗಿದೆ. ಆದರೆ ಮದ್ಯ ಬಂದ್ ಮಾಡಲು ನನಗೆ ಯಾವುದೇ ಅಧಿಕಾರವಿರುವುದಿಲ್ಲ ಎಂದು ತಹಶೀಲ್ದಾರ್​ ಕೆ.ಬಿ.ರಾಮಚಂದ್ರಪ್ಪ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನೀಡಿದ ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಿಮ್ಮ ಮನವಿಯಂತೆ ಮದ್ಯ ಮಾರಾಟದ ಅಂಗಡಿಗಳನ್ನು ಎರಡು ವಾರಗಳ ಕಾಲ ಬಂದ್ ಮಾಡಲು ನನಗೆ ಯಾವುದೇ ಅಧಿಕಾರವಿರುವುದಿಲ್ಲ ಎಂದಿದ್ದಾರೆ.

ದಾವಣಗೆರೆಯಿಂದ ಬರುವ ಒಳ ರಸ್ತೆಗಳಿಗೆ ಹಲವೆಡೆ ಪೊಲೀಸ್ ಚೌಕಿ ನಿರ್ಮಿಸಿ ತಪಾಸಣೆ ಮಾಡಲಾಗುತ್ತಿದೆ. ರೈತರಿಗೆ ಹೊಲ ಗದ್ದೆಗಳಿಗೆ ಹೋಗಿ ಬರಲು ಮಾತ್ರ ಅವಕಾಶ ನೀಡಲಾಗಿದೆ. ದಾವಣಗೆರೆಯಿಂದ ಜನರು ಮದ್ಯ ಖರೀದಿಸಲು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಪೊಲೀಸ್ ಅಧಿಕಾರಿಗಳಿಗೆ ಇವರನ್ನು ತಡೆಯಲು ಸಹ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಲಾಕ್​ಡೌನ್ ಹಾಗೂ ದಾವಣಗೆರೆಯ ಕೆಲವು ಕಡೆ ಸೀಲ್ ​ಡೌನ್ ಆಗಿರುವ ಹಿನ್ನೆಲೆಯಲ್ಲಿ ಹರಿಹರ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ದಾವಣಗೆರೆಯ ಮದ್ಯಪಾನ ಪ್ರಿಯರು ಮದ್ಯವನ್ನು ಖರೀದಿಸಲು ಹರಿಹರಕ್ಕೆ ಬರುತ್ತಿದ್ದಾರೆ. ಇದರಿಂದ ನಮ್ಮ ತಾಲೂಕಿನ ಜನರಿಗೆ ಕೊರೊನಾ ವೈರಸ್ ತಗಲುವ ಅಪಾಯವಿದ್ದು, ಅವರನ್ನು ತಡೆಯಬೇಕು.

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದಾವಣಗೆರೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಮತ್ತು ಮದ್ಯ ಖರೀದಿಸಲು ಅಲ್ಲಿನ ಜನರು ಹರಿಹರಕ್ಕೆ ಬರುತ್ತಿದ್ದು, ಇದರಿಂದ ಕೊರೊನಾ ಸೋಂಕು ತಾಲೂಕಿನ ಜನರಿಗೆ ತಗಲುವ ಅಪಾಯವಿದೆ. ಹಾಗಾಗಿ ಎರಡು ವಾರಗಳ ಕಾಲ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಕರವೇ ಕಾರ್ಯಕರ್ತರು ಜಿಲ್ಲಾ ಉಪಾಧ್ಯಕ್ಷ ನಾಗರಾಜ ಮೆಹರವಾಡೆ ನೇತೃತ್ವದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.