ETV Bharat / state

ಮುಸ್ಲಿಮರಿಗೆ ಯಾವ ಪಕ್ಷದಲ್ಲೂ ಅಧ್ಯಕ್ಷ ಸ್ಥಾನ ನೀಡಿಲ್ಲ, ಜೆಡಿಎಸ್​ ನೀಡಿದೆ: ಸಿಎಂ ಇಬ್ರಾಹಿಂ - ಪಕ್ಷದ ರಾಜ್ಯಧ್ಯಕ್ಷರನ್ನಾಗಿ ಮಾಡಿಲ್ಲ

ಮುಸ್ಲಿಂರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ ಏಕೈಕ ಪಕ್ಷ ಎಂದರೆ ಅದು ಜೆಡಿಎಸ್ ಪಕ್ಷ, ಕರ್ನಾಟಕದಲ್ಲಿ ಯಾವುದೇ ಪಕ್ಷಗಳು ಇತಿಹಾಸದಲ್ಲಿ ಮುಸ್ಲಿಂರನ್ನು ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂರಿಗೆ ಅಳಿದ ಉಳಿದ ಸ್ಥಾನಮಾನ ಕೊಡ್ತಿದ್ರು ಎಂದು ಸಿ ಎಂ ಇಬ್ರಾಹಿಂ ಹೇಳಿದ್ದಾರೆ.

JDS State President CM Ibrahim
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
author img

By

Published : Oct 25, 2022, 10:39 PM IST

ದಾವಣಗೆರೆ: ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಊಟದ ಕೊನೆಯಲ್ಲಿ ಅಳಿದುಳಿದ ಎಂಜಲು ರೀತಿಯಲ್ಲಿ ಸ್ಥಾನಮಾನ ನೀಡುತ್ತಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಸಾರ್ವಜನಿಕ ಸಭೆ ಮಾಡಿ, ಹಬೀವುಲ್ಲಾ ಷಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ‌ ಬಳಿಕ ಮಾತನಾಡಿದ ಅವರು, ನಾವು ಗುರುವಾರದ ಫಕೀರರಿದ್ದಂತೆ, ಜೋಳಿಗೆ ಹಿಡಿದು ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದೇವೆ. ಆ ದೇವರು ಅಧಿಕಾರ ಕೊಟ್ಟರೆ ಒಳ್ಳೆದಾಗುತ್ತೆ, ಇಲ್ಲ ಅಧಿಕಾರ ಕೊಡಲಿಲ್ಲ ಅಂದ್ರೂ ಒಳ್ಳೆದು, ಜೆಡಿಎಸ್​ನ ವರಿಷ್ಠರು ಹೆಚ್ ದೇವೇಗೌಡ್ರು ಮೊಟ್ಟ ಮೊದಲ ಬಾರಿಗೆ ಇಪ್ಪತ್ತು ವರ್ಷಗಳ ಬಳಿಕ ಒಬ್ಬ ಮುಸ್ಲಿಂ ವ್ಯಕ್ತಿಗೆ ಅಂದರೆ ನನಗೆ ಜೆಡಿಎಸ್​ನ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ.

ಮುಸ್ಲಿಮರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ ಏಕೈಕ ಪಕ್ಷ ಎಂದರೆ ಅದು ಜೆಡಿಎಸ್. ಕರ್ನಾಟಕದಲ್ಲಿ ಯಾವುದೇ ಪಕ್ಷಗಳು ತಮ್ಮ ಇತಿಹಾಸದಲ್ಲಿ ಮುಸ್ಲಿಮರನ್ನು ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮರಿಗೆ ಅಳಿದುಳಿದ ಸ್ಥಾನಮಾನ ಕೊಡ್ತಿದ್ರು ಎಂದು ಟೀಕಿಸಿದರು.

ಕಣಕ್ಕಿಳಿಸುವ ಅಭ್ಯರ್ಥಿಗಳ ಬಗ್ಗೆ ಚಿಂತಿಸಿಲ್ಲ: ದಾವಣಗೆರೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತಿಸಿಲ್ಲ. ಮಾಜಿ ಶಾಸಕ ಶಿವಶಂಕರ್ ಅವರನ್ನು ಮಾತ್ರ ಹರಿಹರಕ್ಕೆ ಫೈನಲ್ ಮಾಡಲಾಗಿದೆ. ಮಲೆಬೆನ್ನೂರಿನ ಹಬೀವುಲ್ಲ ಷಾ ಖಾದ್ರಿಯವರು ನೆಲೆಸಿರುವ ಈ ಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತ್ತೊಮ್ಮೆ ದೇವೇಗೌಡರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸ್ತಾರೆ: ಸಿ ಎಂ ಇಬ್ರಾಹಿಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.