ದಾವಣಗೆರೆ: ನಗರದ ಮಡಿವಾಳ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿದ ವತಿಯಿಂದ ಮಾಚಿದೇವ ಜಯಂತಿ ಹಾಗೂ ಸವಿತಾ ಮಹರ್ಷಿಗಳ ಜಯಂತಿಯನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಸಮಾಜದ ಮುಖಂಡ ಆವರಗೆರೆ ಉಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಮಾಚಿದೇವ, ಸವಿತಾ ಮಹರ್ಷಿಗಳ ಜಯಂತಿ ಒಂದೇ ಸಮಯದಲ್ಲಿ ಬಂದಿದ್ದರಿಂದ ಡಿಸಿ ಮನವಿ ಮೇರೆಗೆ ಹಾಗೂ ಇವ ನಮ್ಮವ ಇವ ನಮ್ಮವ ಎಂಬ ಬಸವಣ್ಣನವರ ಆಶಯದಂತೆ ಫೆಬ್ರವರಿ 1ರಂದು ಒಂದೇ ವೇದಿಕೆಯಲ್ಲಿ ಜಯಂತಿ ಆಚರಣೆಗೆ ಮುಂದಾಗಿದ್ದೇವೆ ಎಂದರು.
ಹಾಗೂ ಮಡಿವಾಳ ಮಾಚಿದೇವ ಕುರಿತು ಪ್ರಾಧ್ಯಾಪಕರಾಗಿ ಅನಿತಾ ಜಿ ಅವರು ಉಪನ್ಯಾಸ ನೀಡಲಿದ್ದಾರೆ, ಅಂತಾರಾಷ್ಟ್ರೀಯ ಯೋಗಪಟು ಪರುಶುರಾಮ್ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ, ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಆದ್ವಿಕ್ ಸೇರಿದಂತೆ ವಿವಿಧ ಗಣ್ಯರಿಗೆ, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.