ದಾವಣಗೆರೆ: ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನಡೆದಿದೆ.
ಸರ್ಕಾರದ ಬೊಕ್ಕಸ ತುಂಬಿಸುವ ಉದ್ದೇಶದಿಂದ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಮನೆಗಳಲ್ಲಿ ನೆಮ್ಮದಿ ಹಾಳಾಗಿದೆ. ಮೊದಲೇ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿದ್ದೇವೆ. ನಮ್ಮ ಸಂಸಾರ ಏಕೆ ಹಾಳು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೊರೊನಾ ಬಂದು ಕೆಲಸವಿಲ್ಲದೇ ಖಾಲಿ ಹೊಟ್ಟೆಯಲ್ಲಿ ಬದುಕುವ ಪರಿಸ್ಥಿತಿ ಬಂದಿದೆ. ಇಂತಹ ಸಂಕಷ್ಟದ ವೇಳೆ ಪುರುಷರು ಮದ್ಯದಂಗಡಿಗಳ ಮುಂದೆ ಕಾದು ಮದ್ಯ ಸೇವಿಸಿ ಇದ್ದ ಹಣವೆಲ್ಲಾ ಪೋಲು ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಸಂಸಾರ ನೀಗಿಸುವುದೇ ಕಷ್ಟವಾಗಿದೆ. ಕೂಲಿ ಕೆಲಸ ಇಲ್ಲದೆ ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಂಎಸ್ಐಲ್ ಹಾಗೂ ಬಾರ್ ಓಪನ್ ಮಾಡಿ ಅಷ್ಟು ಇಷ್ಟು ಕೂಡಿಟಿದ್ದ ಹಣವನ್ನೂ ಕುಡಿಯಲು ತಗೆದುಕೊಂಡು ಹೋಗುತ್ತಿದ್ದಾರೆ. ಇತ್ತ ತಿನ್ನಲು ಅನ್ನ ಇಲ್ಲ, ಜೊತೆಗೆ ಕುಡಿದು ಬಂದು ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತಿದೆ. ಇದರಿಂದ ಮುಕ್ತಿ ಕೊಡಿಸಿ ಎಂದು ಜಗಳೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.