ದಾವಣಗೆರೆ: ಕೆಂಪುಕೋಟೆ ಮೇಲೆ ಒಂದು ದಿನ ಭಗವಾಧ್ವಜ ಹಾರಿಸುತ್ತೇವೆ ಎಂದು ಹೇಳುವುದು ಈ ದೇಶದ ಪ್ರಜೆಯ ಹಕ್ಕು, ಆದರೆ, ಸಚಿವ ಈಶ್ವರಪ್ಪನವರು ರಾಷ್ಟ್ರೀಯ ಧ್ವಜಕ್ಕೆ ಯಾವುದೇ ಅಪಮಾನ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರು ಅವರಿಗೆ ರಾಜೀನಾಮೆ ಕೊಡಿ ಎಂದು ಕೇಳಿದ ಕೂಡಲೇ ಕೊಡಲಾಗುವುದಿಲ್ಲ. ವಿಧಾನ ಸೌಧದ ಒಳಗೆ ಮಲಗುವ ಬದಲು ಸಾರ್ವಜನಿಕರ ಸಮಸ್ಯೆ ಕೇಳಿ ಪರಿಹರಿಸುವ ಕಾರ್ಯ ಮಾಡಬೇಕಿತ್ತು ಎಂದರು.
ಮೇಕೆದಾಟು ಪಾದಯಾತ್ರೆ ಕುರಿತು ಮಾತನಾಡಿದ ಅವರು, ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಸರ್ಕಾರಕ್ಕೆ ಸಹಕಾರ ನೀಡಿ ಎಲ್ಲರೂ ಸೇರಿ ಯೋಜನೆಯನ್ನು ಅನುಷ್ಠಾನಗೋಳಿಸೋಣ. ಹೋರಾಟದಿಂದ ಮೇಕೆದಾಟು ಆಗುವುದಿಲ್ಲ. ನೀವೇ ಜಲಸಂಪನ್ಮೂಲ ಸಚಿವರಾಗಿದ್ದವರು ನೀವೇಕೆ ಮಾಡಲಿಲ್ಲ ಎಂದು ತೇಜಸ್ವಿನಿ ಪ್ರಶ್ನಿಸಿದರು.
ಇದನ್ನೂ ಓದಿ: ಸಹಜ ಸ್ಥಿತಿಯತ್ತ ಶಿವಮೊಗ್ಗ ನಗರ