ETV Bharat / state

ಲಾಕ್​ಡೌನ್​​ ಉಲ್ಲಂಘಿಸುವವರ ಪತ್ತೆಗೆ ಕ್ಯಾಮರಾಗಳ ಅಳವಡಿಕೆ: ಎಸ್ಪಿ ಹನುಮಂತರಾಯ - violation of the lock down rule

ಕೋವಿಡ್​​-19​ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ವಶ್ಯಕವಾಗಿ ಓಡಾಡುತ್ತಿರುವವರನ್ನ ಪತ್ತೆ ಹಚ್ಚಲು ದಾವಣಗೆರೆ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

Davanagere
ಎಸ್ಪಿ ಹನುಮಂತರಾಯ
author img

By

Published : Apr 19, 2020, 12:06 PM IST

ದಾವಣಗೆರೆ: ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವವನ್ನು ನಿಯಂತ್ರಿಸಲು ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಈ ಸಂಬಂಧ ದಾವಣಗೆರೆ ಕೊರೊನಾ ವಾರಿಯರ್ಸ್ ತಂಡದ ಮೂಲಕ ವಿಡಿಯೋ ಬಿಡುಗಡೆ ಮಾಡಿರುವ ಅವರು, ಕೋವಿಡ್-19​ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಬಹಳಷ್ಟು ಸಾರ್ವಜನಿಕರು ಅದರಲ್ಲೂ ಯುವಕರು ಕೊರೊನಾ ನಿಯಂತ್ರಣಕ್ಕೆ ವಿಧಿಸಲಾದ ಲಾಕ್​​​​​ಡೌನ್​​​ಗೆ ಸ್ಪಂದಿಸದೆ ಗುಂಪಾಗಿ ಸೇರಿ 144 ಸೆಕ್ಷನ್ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ಸೂಕ್ತವಾಗಿ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಗುಪ್ತ ಕ್ಯಾಮರಾಗಳ ಅಳವಡಿಕೆ ಬಗ್ಗೆ ವಿಡಿಯೋ ಮೂಲಕ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಪ್ರತಿಕ್ಷಣ ಜನರ ಓಡಾಟವನ್ನು ಸೆರೆ ಹಿಡಿಯುವ ಈ ಕ್ಯಾಮೆರಾಗಳು ರವಾನಿಸುವ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ವಿಶೇಷ ಸಾಫ್ಟ್​​ವೇರ್​​ ತಂತ್ರಜ್ಞಾನದ ಮೂಲಕ ಕೂಲಂಕುಷವಾಗಿ ಅವಲೋಕಿಸಿ ಪದೇ ಪದೆ ಓಡಾಡುವವರನ್ನು ಪತ್ತೆ ಮಾಡಲಾಗುವುದು ಎಂದರು.

ವಿಪತ್ತು ನಿರ್ವಹಣಾ ಕಾಯ್ದೆ​​, ಐಪಿಸಿ ಕಾಯಿದೆ ಉಲ್ಲಂಘಿಸುವವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.