ದಾವಣಗೆರೆ: ಅಕ್ರಮವಾಗಿ ಮನೆಯಲ್ಲಿರಿಸಿದ್ದ ರಕ್ತ ಚಂದನದ ತುಂಡುಗಳ ಜೊತೆಗೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೈಲಾಜ್ ಪಾಷಾ ಆರೋಪಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೌಸರ್ ಮಸೀದಿ ಬಳಿ ಘಟನೆ ನಡೆದಿದೆ.
ರಕ್ತಚಂದನ ಕುರಿತ ಖಚಿತ ಮಾಹಿತಿ ಪಡೆದ ಚನ್ನಗಿರಿ ಪೊಲೀಸರು ದಾಳಿ ಮಾಡಿದ್ದಾರೆ. 15 ಲಕ್ಷದ 30,00 ಮೌಲ್ಯದ 510 ಕೆ.ಜಿ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ..
ಇದನ್ನೂ ಓದಿ: ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು