ETV Bharat / state

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಮಾತಾಡೋದಿಲ್ಲ: ರೇಣುಕಾಚಾರ್ಯ - Renukacharya news

ಕಾಂಗ್ರೆಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಾನು ಮಾತನಾಡುವುದಿಲ್ಲ. ರಾಜ್ಯ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇದೆ, ಮೈತ್ರಿ ಬಗ್ಗೆ ಮಾತಾಡೋದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

i am not talk about alliance with JDS: Renukacharya
ರೇಣುಕಾಚಾರ್ಯ
author img

By

Published : Sep 12, 2021, 12:06 AM IST

ದಾವಣಗೆರೆ: ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಬಂದಿದೆ. ಮೈತ್ರಿ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ, ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಗಳು ನಿರ್ಣಯ ಮಾಡುತ್ತಾರೆ, ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಮಾತಾಡೋದಿಲ್ಲ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಿರಾಣಿಯವರು ಬಿಜೆಪಿಯವರೇ, ಮೇಯರ್ ಆಗ್ತಾರೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಾನು ಮಾತನಾಡುವುದಿಲ್ಲ. ರಾಜ್ಯ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇದೆ, ಮೈತ್ರಿ ಬಗ್ಗೆ ಮಾತಾಡೋದಿಲ್ಲ ಎಂದು ಹೇಳಿದರು.

ರೇಣುಕಾಚಾರ್ಯ

ಶ್ರೀಮಂತ್ ಪಾಟೀಲ್ ಬಿಜೆಪಿ ಸೇರಲು ಹಣದ ಅಫರ್ ಕೊಟ್ಟಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಜೆಡಿಎಸ್ ಶಾಸಕರು ಯಡಿಯೂರಪ್ಪ ನವರ ನಾಯಕತ್ವ ನಂಬಿ ಬಂದಿದ್ದು. ಅಮಿತ್ ಷಾ ಬಂದಾಗ ನಾವೆಲ್ಲರೂ ಸ್ವಾಗತ ಮಾಡಿದ್ವಿ, ಆ ಸಂದರ್ಭದಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿಲ್ಲ. ಐದು ಜನ ಶಾಸಕರು ಇದ್ದಾರೆ, ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಮೊದಲಿನಿಂದಲೂ ಕೇಳಿದ್ದೇವೆ ಎಂದರು.

ಗಣೇಶ ಹಬ್ಬದ ನಂತರ ಬಿಎಸ್​ವೈ ರಾಜ್ಯ ಪ್ರವಾಸ: ಯಡಿಯೂರಪ್ಪ ಒಬ್ಬ ಮೇರು ನಾಯಕ, ಪಕ್ಷವನ್ನು ಕಟ್ಟಿ ಬೆಳೆಸಿದವರು. ರಾಜ್ಯ ಪ್ರವಾಸ ಮಾಡಿದರೆ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರು ಸ್ವಾಗತ ಮಾಡುತ್ತಾರೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಪಕ್ಷಕ್ಕೆ‌ ಲಾಭ, ಕರ್ನಾಟಕದಲ್ಲಿ 150 ಸ್ಥಾನ ಬರಬೇಕು ಎನ್ನುವುದು ಯಡಿಯೂರಪ್ಪನವರ ಸಂಕಲ್ಪವಾಗಿದೆ. ಹಾಗಾಗಿ ಪಕ್ಷದ ಪರವಾಗಿ ರಾಜ್ಯ ಪ್ರವಾಸ ಮಾಡ್ತಾರೆ. ತುಪ್ಪ ಚಿಕಿಡಿ ಒಳಗೆ ಚಲ್ಲಿದರೆ ಯಾರಿಗೆ ಲಾಭ ಹಾಗೇ, ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿದರೆ ಬಿಜೆಪಿಗೆ ಲಾಭ, ಕುಟುಂಬಕ್ಕೆ ಅಲ್ಲ ಎಂದರು.

ಸಿಪಿ ಯೋಗೇಶ್ವರ್ ದೆಹಲಿ ಪ್ರವಾಸ:

ನಾನು ಪಕ್ಷದ ಶಿಸ್ತಿನ ಸಿಪಾಯಿ, ಕ್ಷೇತ್ರ ಹಾಗು ಜನರ ಬಗ್ಗೆ ಮಾತ್ರ ಯೋಚಿಸುತ್ತೇನೆ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚಿಸೋದಿಲ್ಲ, ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗೋದು ಬಿಡೋದು ಪಕ್ಷದ ವಿಚಾರ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.