ದಾವಣಗೆರೆ: ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಮ್ಮನ್ನು ನಂಬಿ ಬಂದ ಅತೃಪ್ತ ಶಾಸಕರಿಗೆ ಮೊದಲ ಆದ್ಯತೆ ನೀಡಲಾಗುವುದು, ರಾಷ್ಟ್ರೀಯ ವರಿಷ್ಠರು, ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತಿಳಿಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸಚಿವ ಸಂಪುಟ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷವನ್ನ ನಂಬಿ ಬಂದವರಿಗೆ ಮೊದಲ ಆದ್ಯತೆ ನೀಡುತ್ತೇವೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನಾನು ಸಾಮಾನ್ಯ ಸೇವಕ. ಸಿಎಂ ಯುಡಿಯೂರಪ್ಪ ಒನ್ ಮ್ಯಾನ್ ಶೋ ಅಲ್ಲ, ಅವರ ಪರವಾಗಿ ನಾವೆಲ್ಲ ಇದ್ದೇವೆ, ಸಮರ್ಪಕವಾಗಿ ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಬರಗಾಲ ಇದ್ದಾಗ ಕುಮಾರಸ್ವಾಮಿ ಒಂದು ಕ್ಷೇತ್ರವನ್ನು ಭೇಟಿ ನೀಡಲಿಲ್ಲ, ನಾಮಕಾವಸ್ತೆಗೆ ಒಂದು ದಿನ ಗ್ರಾಮವಾಸ್ತವ್ಯ ಮಾಡಿದ್ದಾರೆ. ಇದೀಗ ಬಾದಾಮಿ ನೆರೆಹಾವಳಿಯಿಂದ ತತ್ತರಿಸಿದೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡಾ ಇದುವರೆಗೂ ಭೇಟಿ ನೀಡಿಲ್ಲ, ಇವರಿಗೆ ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.