ದಾವಣಗೆರೆ: ಲಾಕ್ಡೌನ್ ಪರಿಣಾಮ ಆಹಾರ ಸಿಗದೇ ಪರದಾಡುತ್ತಿದ್ದ ಪೌರ ಕಾರ್ಮಿಕರಿಗೆ ಕಾರ್ಪೋರೇಟರ್ ಒಬ್ಬರು ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ 25 ವಾರ್ಡ್ನಲ್ಲಿ ಪೌರ ಕಾರ್ಮಿಕರು ಬೆಳಗ್ಗೆಯಿಂದಲೂ ಆಹಾರ ಸಿಗದೆ ಪರದಾಡುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಪೊರೇಟರ್ ವೀರೇಶ್, ಸ್ಫೂರ್ತಿ ಸೇವಾ ಟ್ರಸ್ಟ್ ಜೊತೆಗೂಡಿ ಸ್ವಂತ ಖರ್ಚಿನಲ್ಲಿ ಉಪಹಾರ ವಿತರಿಸಿದರು. ಮಾತ್ರವಲ್ಲ, ವಾರ್ಡ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಸುಮಾರು 800 ಜನರಿಗೆ ಮಾಸ್ಕ್ ವಿತರಿಸಿದರು.