ETV Bharat / state

ದಾವಣಗೆರೆಯಲ್ಲಿ ಬರ್ಬರ ಕೊಲೆ: ಖಾರದ ಪುಡಿ ಎರಚಿ ಯುವಕನ ಹತ್ಯೆ - ರೈಲು ಟಿಕೆಟ್​

ಕೊಲೆಯಾಗಿರುವ ಯುವಕನ ಜೇಬಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಬಂದಿರುವ ರೈಲು ಟಿಕೆಟ್​ ದೊರೆತಿದ್ದು, ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ.

Horrific murfder of an unknown youth in Davangere
ದಾವಣಗೆರೆಯಲ್ಲಿ ಭೀಕರ ಹತ್ಯೆ
author img

By

Published : Mar 23, 2023, 5:32 PM IST

ದಾವಣಗೆರೆ: ಯುವಕನೋರ್ವನಿಗೆ ಖಾರದ ಪುಡಿ ಎರಚಿ, ಕುತ್ತಿಗೆ ಕೊಯ್ದು, ಆತನ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ದಾವಣಗೆರೆ ನಗರದಲ್ಲಿ ನಡೆದಿದೆ. ಭೀಕರ ಹತ್ಯೆಗೆ ಇಡೀ ದಾವಣಗೆರೆ ನಗರದ‌ ಜನರು ಬೆಚ್ಚಿಬಿದ್ದಿದ್ದಾರೆ. 25 ರಿಂದ 30 ವರ್ಷದೊಳಗಿನ ಯುವಕನನ್ನು ಹತ್ಯೆ ಮಾಡಲಾಗಿದ್ದು, ಯುವಕನ ಗುರುತು ಪತ್ತೆಯಾಗಿಲ್ಲ. ಇನ್ನು, ಈ ಘಟನೆ ದಾವಣಗೆರೆ ನಗರದ ಶಾಮನೂರು ರಸ್ತೆಯ ಬಾರ್​ವೊಂದರ ಸಮೀಪ ನಡೆದಿದೆ.

ಇಂದು ಬೆಳಗ್ಗೆ ಹತ್ಯೆ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯುವಕನ ಜೇಬಿನಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಬಂದ ರೈಲು ಟಿಕೆಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು,‌ ಈ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾನಗರ ಪೊಲೀಸರು ಕೊಲೆಯ ಆರೋಪಿಗಳನ್ನು ಪತ್ತೆ ಹಚ್ಚಲು ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ‌.

ಖಾರದ ಪುಡಿ ಎರಚಿ ಹಲ್ಲೆ ಮಾಡಿ ಕೊಲೆ: ಮೃತ ಅಪರಿಚಿತ ವ್ಯಕ್ತಿಗೆ ದುಷ್ಕರ್ಮಿಗಳು ಮೊದಲಿಗೆ ಖಾರದ ಪುಡಿ ಎರಚಿ ಭೀಕರವಾಗಿ ಕತ್ತು ಕೊಯ್ದಿದ್ದಾರೆ. ಬಳಿಕ ತಲೆಯ ಭಾಗಕ್ಕೆ ಕಲ್ಲು ಎತ್ತಿ ಹಾಕಿ ಈ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿ ನಂತರ ನಗರದ ಶಾಮನೂರ ರಸ್ತೆಯ ಇಕ್ಕೆಲದಲ್ಲಿ ಮೃತದೇಹವನ್ನು ಬಿಟ್ಟು ಪರಾರಿಯಾಗಿದ್ದಾರೆ. ಇನ್ನು ಮೃತ ಯುವಕನ ಗುರುತು ಪತ್ತೆಯಾಗದೆ ಇರುವುದು ವಿದ್ಯಾನಗರ ಪೊಲೀಸ್ ಠಾಣಾ ಪೊಲೀಸರಿಗೆ ತಲೆಬಿಸಿನೋವಾಗಿ ಪರಿಣಮಿಸಿದೆ.

ಮೃತ ಯುವಕನ ಗುರುತು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಸದ್ಯ ಮೃತ ಯುವಕನ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಆಸ್ತಿ ವೈಷಮ್ಯ: ಸ್ನೇಹಿತನ ಮೇಲೆ ಕಾರು ಹತ್ತಿಸಿ ವಿಕೃತಿ; ಆರೋಪಿಯ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.