ETV Bharat / state

ದಾವಣಗೆರೆಯಲ್ಲಿ ಮನೆ ಕಂದಾಯ ಏರಿಕೆ: ಕಾಂಗ್ರೆಸ್​ನಿಂದ ಪ್ರತಿಭಟನೆಯ ಎಚ್ಚರಿಕೆ​ - 2019-20ನೇ ಸಾಲಿನ ಕಂದಾಯ ಪಾವತಿಸಲು ಖಾತೆದಾರರಿಗೆ ಪಾಲಿಕೆ ಸೂಚನೆ

ಈ ಹಿಂದೆ ಇದ್ದ 1,799 ರೂ. ಮನೆ ಕಂದಾಯವನ್ನು 3,518 ರೂಪಾಯಿಗೆ ಹೆಚ್ಚಿಸಲಾಗಿದೆ. ಕಂದಾಯ ಹೆಚ್ಚಳ ಮಾಡದೆ ಹಳೆ ಕಂದಾಯವನ್ನು ಮುಂದುವರಿಸಬೇಕು. ವಿದ್ಯುತ್ ಬಿಲ್ ಸಹ ಏರಿಕೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದ್ದಾರೆ.

Home revenue raised at Davanagere amid lockdown
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ
author img

By

Published : May 25, 2020, 7:05 PM IST

ದಾವಣಗೆರೆ: ಲಾಕ್​ಡೌನ್​​ ವೇಳೆಯಲ್ಲಿ‌ ಮಹಾನಗರ ಪಾಲಿಕೆ ಏಕಾಏಕಿ ಮನೆ ಕಂದಾಯ ಏರಿಕೆ ಮಾಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, 2019-20ನೇ ಸಾಲಿನ ಕಂದಾಯ ಪಾವತಿಸಲು ಖಾತೆದಾರರಿಗೆ ಪಾಲಿಕೆ ಸೂಚಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ಕಂದಾಯ ವಸೂಲಿಗೆ ಇಳಿದಿರುವುದು ಖಂಡನೀಯ. ಈ ನಿರ್ಣಯ ವಾಪಸ್ ಪಡೆಯದಿದ್ದರೆ ಲಾಕ್​ಡೌನ್​ ಮುಗಿದ ಬಳಿಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ
ಈ ಹಿಂದೆ ಇದ್ದ 1,799 ರೂ. ಮನೆ ಕಂದಾಯವನ್ನು 3,518 ರೂಪಾಯಿಗೆ ಹೆಚ್ಚಿಸಲಾಗಿದೆ. ಕಂದಾಯ ಹೆಚ್ಚಳ ಮಾಡದೆ ಹಳೆ ಕಂದಾಯವನ್ನು ಮುಂದುವರಿಸಬೇಕು. ವಿದ್ಯುತ್ ಬಿಲ್ ಸಹ ಏರಿಕೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಬಿಲ್ಲಿನ‌ ಮೊತ್ತ ಹೆಚ್ಚಾಗಿ ಬರುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
30,000 ಆಹಾರ ಕಿಟ್​ಗಳ ಗುಣಮಟ್ಟದ ಬಗ್ಗೆ ಅನುಮಾನ
ಪಾಲಿಕೆ ವ್ಯಾಪ್ತಿಯಲ್ಲಿ 30,000 ಆಹಾರ ಕಿಟ್​ಗಳನ್ನು ನೀಡಲಾಗುತ್ತಿದ್ದು, ಅವುಗಳು ಗುಣಮಟ್ಟದಿಂದ ಕೂಡಿಲ್ಲ.‌ ಇದರಲ್ಲಿ ಅವ್ಯವಹಾರ ನಡೆದಿದೆ. ಪಾಲಿಕೆ ಮೇಯರ್, ಆಯುಕ್ತರು, ಅಕೌಂಟ್ ವಿಭಾಗದವರು ಸೇರಿಕೊಂಡು ಹಣ ಲೂಟಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪಾಲಿಕೆ ಸದಸ್ಯರಿಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಲೆಕ್ಕಶೋಧನೆಗೆ ಬಂದರೆ ಇವರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.