ದಾವಣಗೆರೆ: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರೋನ್ ವೈರಾಣು ಹರಡುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಲಸಿಕೆ ಹಾಕುವುದನ್ನು ಹೆಚ್ಚು ಹೆಚ್ಚು ಮಾಡುತ್ತಿದೆ. ಅದರಂತೆ ಜಿಲ್ಲೆಯಲ್ಲೂ ವ್ಯಾಕ್ಸಿನ್ ಹಾಕಲು ಆರೋಗ್ಯ ಸಿಬ್ಬಂದಿ ಹೋದ ವೇಳೆ ಇಬ್ಬರು ಹೈ ಡ್ರಾಮ ಮಾಡಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಲು ಹೋಗಿದ್ದಾರೆ. ಈ ವೇಳೆ, ಗ್ರಾಮದಲ್ಲಿ ವ್ಯಾಕ್ಸಿನ್ ಹಾಕುತ್ತಿದ್ದಾರೆ ಎಂಬುದನ್ನು ಅರಿತ ತಿಪ್ಪೇಶ್ ಎಂಬ ಕುರಿಗಾಯಿ ಲಸಿಕೆಗೆ ಹೆದರಿ ಹೊಲದಲ್ಲಿ ಅವಿತು ಕುಳಿತ್ತಿದ್ದನು. ಈ ಕುರಿತು ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಹೊಲಕ್ಕೆ ಹೋಗಿ ಲಸಿಕೆ ಹಾಕಿದ್ದಾರೆ.
ಅದರಂತೆ ಮುಸ್ತಾಫ್ ನಗರದಲ್ಲಿ ವ್ಯಕ್ತಿಯೊಬ್ಬ ಲಸಿಕೆ ಹಾಕಿಸಿಕೊಳ್ಳಲು ಆಧಾರ್ ಕಾರ್ಡ್ ಇಲ್ಲ. ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲ ಎಂದು ಹೈಡ್ರಾಮಾ ಮಾಡುತ್ತಿದ್ದನು. ಇದಕ್ಕೆಲ್ಲ ಸೊಪ್ಪು ಹಾಕದ ಸಿಬ್ಬಂದಿ, ವ್ಯಕ್ತಿಯನ್ನು ಬಿಡದೇ ಲಸಿಕೆ ಹಾಕಿದ್ದಾರೆ.
ಇನ್ನು ಮೆಹೆಬೂಬ್ ನಗರ, ಬಾಷಾ ನಗರದ ಮನೆಗಳಿಗೆ ಆರೋಗ್ಯ ಸಿಬ್ಬಂದಿ ನುಗ್ಗಿ ಲಸಿಕೆ ಹಾಕಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ನಗರ ಮಟ್ಟದಲ್ಲಿ ಕೋವಿಡ್ ರೂಪಾಂತರಿ ವೈರಸ್ ತಡೆಗೆ ಕ್ರಮ: ತಜ್ಞರ ಸಮಿತಿಯೊಂದಿಗೆ ಸಭೆ