ದಾವಣಗೆರೆ : ತುಂಗಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾದ ಬೆನ್ನಲ್ಲೇ ಜಿಲ್ಲೆಯ ಹರಿಹರ ತಾಲೂಕಿನ ಗಂಗಾನಗರ ಜಲಾವೃತಗೊಂಡಿದೆ. 20 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಶಾಲಾ ಮಕ್ಕಳ ಪುಸ್ತಕಗಳು, ದಾಖಲೆಗಳು ನೀರುಪಾಲಾಗಿವೆ. ಮಳೆಯಿಂದಾಗಿ ಇಷ್ಟೆಲ್ಲ ಅವಾಂತರಗಳು ಸೃಷ್ಟಿಯಾಗಿದ್ರೂ, ಶಾಸಕ ಎಸ್ ರಾಮಪ್ಪ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ನಿರಾಶ್ರಿತರು ದೂರಿದ್ದಾರೆ.
ಅಲ್ಲದೆ ಈ ವಾರ್ಡ್ಗೆ ಶಾಸಕ ಎಸ್ ರಾಮಪ್ಪ ಅವರ ಪುತ್ರನೇ ಕೌನ್ಸಿಲರ್ ಆಗಿದ್ದು, ಇಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡುತ್ತೇವೆ, ನಿವೇಶನ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆಯೇ ಹೊರತು, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರಾಶ್ರಿತರಿಂದ ನ್ಯಾಯಕ್ಕಾಗಿ ಪ್ರತಿಭಟನೆ : ಪ್ರವಾಹದಿಂದಾಗಿ ಅತಂತ್ರರಾಗಿರುವ ಗಂಗಾನಗರದ 20 ಹೆಚ್ಚು ಮನೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ. ಜಲಾವೃತವಾಗಿರುವ ಗಂಗಾನಗರದಿಂದ ಬೇರಡೆ ಜಾಗ ನೀಡುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಹರಿಹರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಪ್ರತಿಭಟನಾನಿರತರಿಗೆ ಜಯ ಕರ್ನಾಟಕ ಸಂಘಟನೆ ಸಾಥ್ ನೀಡಿದ್ದು, ನಿವೇಶನ ಸಿಗುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಓದಿ : ಕೆಸರಲ್ಲಿ ಸಿಲುಕಿದ ಕಾಲು... ಹೊರಬರಲು ಸಚಿವ ಬೈರತಿ ಬಸವರಾಜ್ ಪರದಾಟ: VIDEO