ETV Bharat / state

ಬಿಜೆಪಿ ಪಕ್ಷದಿಂದ ಉಚ್ಛಾಟನೆಯಾದ ಬಗ್ಗೆ ಮಾಜಿ ಶಾಸಕ ಗುರುಸಿದ್ದನಗೌಡ ಹೇಳಿದ್ದೇನು?

ಪಕ್ಷದಿಂದ ಉಚ್ಛಾಟನೆ ಬಗ್ಗೆ ಮಾಜಿ ಶಾಸಕ ಗುರುಸಿದ್ದನಗೌಡ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಶಾಸಕ ಗುರುಸಿದ್ದನಗೌಡ
ಮಾಜಿ ಶಾಸಕ ಗುರುಸಿದ್ದನಗೌಡ
author img

By ETV Bharat Karnataka Team

Published : Sep 6, 2023, 10:11 PM IST

ಬಿಜೆಪಿ ಪಕ್ಷದಿಂದ ಉಚ್ಛಾಟನೆ ಬಗ್ಗೆ ಮಾಜಿ ಶಾಸಕ ಗುರುಸಿದ್ದನಗೌಡ ಪ್ರತಿಕ್ರಿಯೆ

ದಾವಣಗೆರೆ : ಈ ಬಾರಿ ನಡೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಜಗಳೂರು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಶಾಸಕ ಗುರುಸಿದ್ದನಗೌಡ ಮತ್ತು ಅವರ ಮೂರು ಜನ ಮಕ್ಕಳನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಈ ಕುರಿತು ಗುರುಸಿದ್ದನಗೌಡ ಅವರು ದಾವಣಗೆರೆಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಯಾವುದೇ ವಿಷಯಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪ ಮಾಡುವುದು ಸೂಕ್ತವಲ್ಲ ಎಂದು ನಾನು ಭಾವಿಸಿದ್ದೇನೆ. ಇವತ್ತು ಬೆಳಗ್ಗೆಯಿಂದ ಆದ ಬೆಳವಣಿಗೆ ಬಗ್ಗೆ ಹೇಳುತ್ತೇನೆ. ನನ್ನ ಸ್ನೇಹಿತರೊಬ್ಬರು ಬೆಳಗ್ಗೆ 7 ಗಂಟೆ ಸುಮಾರಿ ಕರೆ ಮಾಡಿ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ತಿಳಿಸಿದರು. ವಿಷಯ ತಿಳಿದು ಶಾಕ್​ ಆಯ್ತು. ಬಳಿಕ ಮಾಧ್ಯಮಗಳಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಮಾಜಿ ಶಾಸಕ ಗುರುಸಿದ್ದನಗೌಡ ಮತ್ತು ಅವರ ಮೂರು ಜನ ಮಕ್ಕಳಾದ ಟಿ ಜಿ ಅರವಿಂದ ಕುಮಾರ್, ಟಿ ಜಿ ಪವನ ಕುಮಾರ್, ಟಿ ಜಿ ರವಿಕುಮಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ ಎಂದು ತೋರಿಸಲಾಗುತ್ತಿತ್ತು.

ವಿಧಾನಸಭೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿದೆ. ಇದರ ಮಧ್ಯೆ ಬಿಜೆಪಿ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ನನಗೆ 65 ವರ್ಷದ ಪಕ್ಷದ ನಂಟಿದೆ. ಹೀಗಿರುವಾಗ ಏನಿದು ಬೆಳವಣಿಗೆ ಎಂದು ತಿಳಿಯಲಿಲ್ಲ. ಇನ್ನು ಇದರ ಬಗ್ಗೆ ವಿಚಾರಿಸಲು ರಾಜ್ಯ ನಾಯಕರನ್ನು ಸಂಪರ್ಕ ಮಾಡಿದೆ ಅವರು ನಿಮನ್ನು ಏಕೆ ಪಕ್ಷದಿಂದ ತೆಗೆಯುತ್ತಾರೆ ಎಂದರು. ಇನ್ನು ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಅವರಿಗೂ ಕರೆ ಮಾಡಿ ಕಾರಣ ಕೇಳಿದೆ, ನನಗೆ ಗೊತ್ತಿಲ್ಲ ಸರ್ ಎಂದರು. ಬೇರೆ ಕಾರಣಗಳನ್ನು ಇಟ್ಟುಕೊಂಡು ಮಾಡಿರ‌ಬಹುದು ಎಂದು ಕೆಲವರು ತಿಳಿಸಿದರು. ಅವರಿಗೂ ಕೂಡ ನನಗೆ ಕಾರಣಗಳು ಗೊತ್ತಿಲ್ಲ ಹೇಳಿ ಎಂದು ಕೇಳಿದೆ ಎಂದರು.

ಕೆಲವರು ನಿಮ್ಮ ಮಗ ಎಂಪಿ ಟಿಕೆಟ್ ಕೇಳಿದ್ದಕ್ಕೆ ಈ ರೀತಿ ಪಕ್ಷದ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳಿದರು. ಇದು ಎಷ್ಷರ ಮಟ್ಟಿಗೆ ಸರಿ. ಪಕ್ಷದಲ್ಲಿ ಶಿಸ್ತು ಪಾಲನ ಸಮಿತಿ ಇದೆ. ಲಿಂಗರಾಜ್ ಪಾಟೀಲ್ ಅವರು ಈ ಶಿಸ್ತು ಪಾಲನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರಿಗೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಶಿಸ್ತು ಅಂದ್ರೆ ಏನು? ಎಂದು ಅವರು ಕೂಡ ಶಾಕ್​ ಆಗಿ ನನಗೂ ಗೊತ್ತಿಲ್ಲ ಎಂದರು.

ಆದರೇ, ಚುನಾವಣೆಯಲ್ಲಿ ಏನೇನೋ ಆಗಿ ಹೋಗಿದೆ‌. ಪಕ್ಷದಲ್ಲಿ ಅವರನ್ನು ತೆಗಿ, ಇವರನ್ನು ತೆಗಿ ಎಂದು ಹೇಳುತ್ತಿದ್ದರೆ, ಪಕ್ಷ ಖಾಲಿ ಆಗುತ್ತದೆ. ಪಕ್ಷದಲ್ಲಿ ಉಚ್ಚಾಟನೆ ಮಾಡಿರುವುದರ ಬಗ್ಗೆ ಯಾರಿಗೂ ಗೊತ್ತೇ ಇಲ್ಲದಂತೆ ಮತ್ತೆ ಪ್ರಕಟಣೆ ಹೊರಡಿಸಿದ್ದಾರೆ. ಇದರ ಬಗ್ಗೆ ನಿಂಗರಾಜ್ ಪಾಟೀಲ್ ಅವರಿಗೂ ಗೊತ್ತಿಲ್ಲ. ರಾಜ್ಯ ನಾಯಕರು ಯಾರು ಕೂಡ ಇದರ ಬಗ್ಗೆ ಮಾತನಾಡಿಲ್ಲ. ಅವರ ಗಮನಕ್ಕೂ ಈ ವಿಚಾರ ಬಂದಿಲ್ಲ ಎಂದು ಮಾಜಿ ಶಾಸಕರಿಗೆ, ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಗುರುಸಿದ್ದನಗೌಡ ಅವರ ಮಗ ರವಿಕುಮಾರ್ ಸ್ಪರ್ಧಿ ಆಗುತ್ತಾನೆ ಎಂದು ಉಚ್ಚಾಟನೆ ಮಾಡಿರಬಹುದು ಎಂಬ ಪ್ರಶ್ನೆ ಕೇಳಿದಾಗ ಇದನ್ನು ಮಾಡಿಸಿದ್ದಾರೋ ಗೊತ್ತಿಲ್ಲ. ಮಾಡಿಸಿದ್ದರು ಮಾಡಿಸಿರಬಹುದು ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಎಸ್ ವಿ ರಾಮಚಂದ್ರ ಅವರಿಗೆ ಸೋಲಿಗೆ ಕಾರಣಕರ್ತರು ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ 80 ವರ್ಷ ಇರುವ ಕಾರಣ ಸಕ್ರೀಯ ರಾಜಕಾರಣದಲ್ಲಿಲ. ನನ್ನ ಮಗ ರವಿಕುಮಾರ್ ವೈದ್ಯಕೀಯ ಪ್ರಕೋಷ್ಠದಲ್ಲಿ ರಾಜ್ಯ ಸಮಿತಿ ಸದಸ್ಯರಾಗಿರುವುದ್ದರಿಂದ ಎಲ್ಲ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿದ್ದನು. ಇನ್ನೇನು ಇವರಿಗೆ ಮಾಡಬೇಕು. ಕ್ಯಾಂಪೆನ್ ಯಾವ್ ರೀತಿ ಮಾಡಬೇಕು. ನನ್ನ ಗಮನದಲ್ಲಿರುವವರಿಗೆ ಕರೆ ಮಾಡಿ ರಾಮಚಂದ್ರ ಅವರಿಗೆ ಸಪೋರ್ಟ್​ ಮಾಡುವಂತೆ ಹೇಳಿದ್ದೇನೆ. ಜಗಳೂರು ಅಭ್ಯರ್ಥಿಯನ್ನು ಸಂಸದ ಜಿಎಂ ಸಿದ್ದೇಶ್ವರ್ ಅವರು ಗೆಲ್ಲಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ದಾವಣಗೆರೆ: ಪಕ್ಷ ವಿರೋಧಿ ಚಟುವಟಿಕೆ ಆರೋಪ.. ಮಾಜಿ ಶಾಸಕ ಮತ್ತವರ ಮೂವರು ಮಕ್ಕಳು ಬಿಜೆಪಿಯಿಂದ ಉಚ್ಛಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.