ದಾವಣಗೆರೆ : ಜಿಲ್ಲೆಯಲ್ಲಿ ಇಂದು ಸೋಂಕಿಗೆ ಮೂವರು ಮಹಿಳೆಯರು ಸೇರಿ ಐವರು ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 62ಕ್ಕೇರಿದೆ. 191 ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 2619.
ಜುಲೈ 25ರಂದು ದಾಖಲಾಗಿದ್ದ 68 ವರ್ಷದ ವೃದ್ಧೆ ಆಗಸ್ಟ್ 2, ಜುಲೈ 31ರಂದು ದಾಖಲಾಗಿದ್ದ 65 ವರ್ಷದ ವೃದ್ಧ ಆಗಸ್ಟ್ 2, ಆಗಸ್ಟ್ 1ರಂದು ದಾಖಲಾಗಿದ್ದ 45 ವರ್ಷದ ಮಹಿಳೆ ಹಾಗೂ 60 ವರ್ಷದ ವೃದ್ಧೆ ಆಗಸ್ಟ್ 3ರಂದು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 56 ವರ್ಷದ ಪುರುಷ ಆಗಸ್ಟ್ 1ರಂದು ಸಾವನ್ನಪ್ಪಿದ್ದಾರೆ. ಎಲ್ಲರೂ ತೀವ್ರ ಉಸಿರಾಟ, ಜ್ವರ ಹಾಗೂ ಕಫದಿಂದ ಬಳಲುತ್ತಿದ್ದರು.
ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಇಂದು 93 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 1654 ಜನರು ಡಿಸ್ಚಾರ್ಜ್ ಆದಂತಾಗಿದೆ. ಸದ್ಯ 903 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ. ಹತ್ತು ಮಂದಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.