ETV Bharat / state

ದಾವಣಗೆರೆ: ಗ್ರಾಮ‌ ಪಂಚಾಯಿತಿ ಮಹಿಳಾ ಕಂಪ್ಯೂಟರ್ ಆಪರೇಟರ್​ಗೆ ಕಿರುಕುಳ ಆರೋಪ - etv bharat karnataka

ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಹಾಗೂ ಇತರೆ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಕಂಪ್ಯೂಟರ್ ಆಪರೇಟರ್​ ಆರೋಪಿಸಿದ್ದಾರೆ.

a-female-computer-operator-is-accused-of-harassment-by-husband-of-panchayat-member
ದಾವಣಗೆರೆ: ಮಹಿಳಾ ಕಂಪ್ಯೂಟರ್ ಆಪರೇಟರ್​ಗೆ ಕಿರುಕುಳ ಆರೋಪ
author img

By ETV Bharat Karnataka Team

Published : Oct 29, 2023, 11:25 AM IST

Updated : Oct 29, 2023, 12:43 PM IST

ಗ್ರಾ.ಪಂ ಮಹಿಳಾ ಕಂಪ್ಯೂಟರ್ ಆಪರೇಟರ್​ಗೆ ಕಿರುಕುಳ ಆರೋಪ

ದಾವಣಗೆರೆ: ಹರಿಹರ ತಾಲೂಕಿನ ಸಾಲುಕಟ್ಟೆ ಗ್ರಾಮ‌ ಪಂಚಾಯಿತಿಯ ಮಹಿಳಾ ಕಂಪ್ಯೂಟರ್ ಆಪರೇಟರ್​ಗೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಹಾಗೂ ಇತರೆ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಂಚಾಯಿತಿಯಲ್ಲಿ ಪ್ರತಿಮಾ ಎಂಬವರು ಕಳೆದ ಮೂರು ವರ್ಷದಿಂದ‌ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರ ಕೆಲ ಪಂ. ಸದಸ್ಯರು ಸುಖಾಸುಮ್ಮನೆ ಕಿರುಕುಳ ನೀಡಿರುವುದಾಗಿ ಅವರು ಆರೋಪಿಸಿದ್ದಾರೆ. ಪ್ರತಿಮಾ ಅವರ ​ಸಂಬಂಧಿಕರು ಪಂಚಾಯಿತಿಗೆ ಆಗಮಿಸಿದಾಗ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಪ್ರತಿಮಾ ಮಾತನಾಡಿ, "ಕಳೆದ ಮೂರು ವರ್ಷಗಳಿಂದ ಸಿದ್ದಪ್ಪ ಎಂಬವರಿಂದ ನನಗೆ ವಯಕ್ತಿಕವಾಗಿ ಮತ್ತು ಕೆಲಸದಲ್ಲಿ ತೊಂದರೆಯಾಗುತ್ತಿದೆ. ಅವರು ಮಾಡುತ್ತಿದ್ದ ಅಕ್ರಮ ಕೆಲಸಗಳಿಗೆ ನಾನು ಸ್ಪಂದಿಸುತ್ತಿರಲಿಲ್ಲ. ನನ್ನ ಮದುವೆ ನಿಶ್ಚಿತಾರ್ಥವನ್ನೂ ಅವರು ಕೆಡಿಸಿದ್ದಾರೆ. ಕೆಲವು ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷ್ಯ ಇಲ್ಲ ಎಂದು ನಾನು ಸುಮ್ಮನಾಗಿದ್ದೆ" ಎಂದರು.

"ನನ್ನ ಜಾಗಕ್ಕೆ ಬೇರೆಯವರನ್ನು ಕರೆದುಕೊಳ್ಳಬೇಕು ಎಂದು ನನಗೆ ತೊಂದರೆ ಕೊಡುತ್ತಿದ್ದಾರೆ. ನರೇಗಾ ಯೋಜನೆ ವಿಚಾರದಲ್ಲಿ ಸಿದ್ದಪ್ಪ ಎಂಬವರು ಭಾಗಿಯಾಗುತ್ತಿದ್ದರು. ನನ್ನನ್ನು ಕೆಲಸದಿಂದ ತೆಗೆಯಬೇಕೆಂದು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನನಗೆ ಕಚೇರಿಯಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ಪಾಲಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿಲ್ಲ, ಎಲ್ಲಾ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದೇನೆ. ಆದರೂ ಸಿದ್ದಪ್ಪ, ನಾಗರಾಜಪ್ಪ ಹಾಗೂ ಮತ್ತಿತರರು ತೊಂದರೆ ಕೊಡುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾ.ಪಂ ಸದಸ್ಯೆಯ ಪತಿ ಸಿದ್ದಪ್ಪ ಮಾತನಾಡಿ, "ನಮ್ಮ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ನಡೆಯುತ್ತಿದೆ. ನನ್ನ ಪತ್ನಿ ಗ್ರಾ.ಪಂ ಸದಸ್ಯೆ. ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಪಿಡಿಒ ಮತ್ತು ಇಂಜಿನಿಯರ್ ಮಾಡಿಸುತ್ತಿದ್ದಾರೆ. ಅದರಲ್ಲಿ ಗ್ರಾ.ಪಂ ಸದಸ್ಯರು ಮತ್ತು ಬೇರೆಯಾರು ಮಧ್ಯಪ್ರವೇಶ ಮಾಡಿಲ್ಲ. ಕಂಪ್ಯೂಟರ್ ಆಪರೇಟರ್ ಸುಮ್ಮನೆ ನನ್ನ ವಿರುದ್ಧ ದ್ವೇಷ ಕಟ್ಟಿಕೊಂಡಿದ್ದಾರೆ. ನಾನು ಅವರಿಗೆ ಏನಾದರೂ ತೊಂದರೆ ಕೊಟ್ಟಿದ್ದರೆ ಸಾಕ್ಷ್ಯ ಒದಗಿಸಲಿ. ನನ್ನ ಬಗ್ಗೆ ಅವರು ಅವಾಚ್ಯವಾಗಿ ಮಾತನಾಡಿದ್ದಾರೆ" ಎಂದರು.

"ನಾನು ಗ್ರಾಮ ಪಂಚಾಯಿತಿಗೆ ವೈಯಕ್ತಿಕವಾಗಿ ಅವರ ವಿರುದ್ಧ ದೂರು ಕೊಟ್ಟಿದ್ದೇನೆ. ಮೇಲಾಧಿಕಾರಿಗಳ ಬಳಿ ಹೋಗಿ ಇವರನ್ನು ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದ್ದೇನೆ. ಕಂಪ್ಯೂಟರ್ ಆಪರೇಟರ್​ ಆಗಿರುವ ಇವರು ಗ್ರಾಮದ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡಿ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಗಲಾಟೆ ನಡೆಯುವ ಸಾಧ್ಯತೆ ಇದೆ. ಕೆಲಸದಿಂದ ತೆಗೆದು ಹಾಕುವ ಅಧಿಕಾರ ಗ್ರಾಮ ಪಂಚಾಯಿತಿ ಮತ್ತು ಪಿಡಿಒಗಿದೆ. ಅವರನ್ನು ನೀವು ತೆಗೆದು ಹಾಕಲು ಬಯಸಿದ್ದರೆ ತೆಗೆದು ಹಾಕಿ ಎಂದು ಹೇಳಿದ್ದಾರೆ. ನಾನು ಕಂಪ್ಯೂಟರ್ ಆಪರೇಟರ್​ಗೆ ಯಾವುದೇ ತೊಂದರೆ ಕೊಟ್ಟಿಲ್ಲ" ಎಂದು ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆದರು.

ಇದನ್ನೂ ಓದಿ: ಕಲಬುರಗಿ ಬ್ಯೂಟಿಷಿಯನ್ ಕೊಲೆ ಪ್ರಕರಣಕ್ಕೆ ಹೊಸ ತಿರುವು: ಪೊಲೀಸರು ಹೇಳಿದ್ದು ಹೀಗೆ

Last Updated : Oct 29, 2023, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.