ETV Bharat / state

ಕಾಂಗ್ರೆಸ್ ತೊರೆದ ದಿ. ಜೆ ಹೆಚ್ ಪಟೇಲ್ ಸಹೋದರನ ಪುತ್ರ; ಜೆಡಿಎಸ್ ಸೇರ್ಪಡೆಗೊಂಡ ತೇಜಸ್ವಿ ಪಟೇಲ್ - ಚನ್ನಗಿರಿಯಲ್ಲಿ ತೇಜಸ್ವಿ ಪಟೇಲ್

ಕಾಂಗ್ರೆಸ್ ಪಕ್ಷ ತೊರೆದು ಟಿಕೆಟ್ ಆಕಾಂಕ್ಷಿ ತೇಜಸ್ವಿ ಪಟೇಲ್​ ಜೆಡಿಎಸ್​ಗೆ ಸೇರ್ಪಡೆ.

jds
ಜೆಡಿಎಸ್​
author img

By

Published : Apr 15, 2023, 6:12 PM IST

ದಾವಣಗೆರೆ: ಮಾಜಿ ಸಿಎಂ ದಿವಂಗತ ಜೆ ಹೆಚ್ ಪಟೇಲ್ ಸಹೋದರನ ಪುತ್ರ ರೈತ ಮುಖಂಡ ತೇಜಸ್ವಿ ಪಟೇಲ್ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿ ಕೈ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಅವರು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಜೆಡಿಎಸ್ ಮೂಲಗಳಿಂದ ಕೇಳಿ ಬರುತ್ತಿದೆ.

ಇನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ತೇಜಸ್ವಿ ಪಟೇಲ್ ಅವರು ಹರಿಹರದ ಜೆಡಿಎಸ್ ಅಭ್ಯರ್ಥಿ ಹೆಚ್ ಎಸ್ ಶಿವಶಂಕರ್ ನಿವಾಸದಲ್ಲಿ ಜೆಡಿಎಎಸ್​ಗೆ ಸೇರ್ಪಡೆಯಾಗಿದ್ದಾರೆ. ಇದಲ್ಲದೆ ಚನ್ನಗಿರಿ ಹಾಗು ಮಾಯಕೊಂಡದಲ್ಲಿ ಜೆಡಿಎಸ್ ಹೊಸ ಅಭ್ಯರ್ಥಿಗಳಾದ ಚನ್ನಗಿರಿಯಲ್ಲಿ ತೇಜಸ್ವಿ ಪಟೇಲ್ ಮಾಯಕೊಂಡದಲ್ಲಿ ಆನಂದಪ್ಪ ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಇನ್ನೂ ಸಮಯ ಇದೆ, ಕಾದು ನೋಡೋಣ.. ಟಿಕೆಟ್ ನೀಡಿಯೇ‌ ನೀಡುತ್ತಾರೆ: ಶೆಟ್ಟರ್ ವಿಶ್ವಾಸ

ಕಾಂಗ್ರಸೆ್​ನಿಂದ ಚನ್ನಗಿರಿ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ತೇಜಸ್ವಿ ಪಟೇಲ್: ಚನ್ನಗಿರಿ ಹಾಗು ಮಾಯಕೊಂಡ ಮತ ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿರುವ ಜೆ ಹೆಚ್ ಪಟೇಲ್ ಕುಟುಂಬದ ನಡೆಯಿಂದ ಕಾಂಗ್ರೆಸ್ ಕಲಿಗಳಿಗೆ ಗೆಲುವು ಸಾಧಿಸಲು ತಕ್ಕಮಟ್ಟಿಗೆ ತೊಂದರೆಯಾಗಲಿದೆ. ಇನ್ನು ಕಾಂಗ್ರೆಸ್​ನಿಂದ‌ ಚನ್ನಗಿರಿ ಕ್ಷೇತ್ರಕ್ಕೆ ತೇಜಸ್ವಿ ಪಟೇಲ್ ಆಕಾಂಕ್ಷಿಯಾಗಿದ್ದರು. ಅಲ್ಲಿ ಶಿವಗಂಗಾ ಬಸವರಾಜ್​ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದರಿಂದ ತೇಜಸ್ವಿ ಪಟೇಲ್ ಪಕ್ಷ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಟಕ್ಕರ್‌ ಕೊಡಲು ಜೆಡಿಎಸ್ ಪ್ಲಾನ್ ?: ಇನ್ನು ಆನಂದಪ್ಪ ಅವರು ಕೂಡ ಮಾಯಕೊಂಡದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರು ಕೂಡ ಜೆಡಿಎಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್​ಗೆ ರೆಬಲ್ ಆಗಿ ಇಬ್ಬರು ನಾಯಕರು ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಜೆಡಿಎಸ್ ಸೇರ್ಪಡೆಯಾಗಿದ್ದು, ಕೈ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್​ಗೆ ಬಂಡಾಯವಾಗಿ ಚನ್ನಗಿರಿಯಲ್ಲಿ ತೇಜಸ್ವಿ ಪಟೇಲ್, ಮಾಯಕೊಂಡದಲ್ಲಿ ಆನಂದಪ್ಪ ಸ್ಪರ್ಧೆ ಮಾಡುತ್ತಿರುವುದು ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಟಕ್ಕರ್‌ ಕೊಡಲು ಜೆಡಿಎಸ್ ಪ್ಲಾನ್ ಮಾಡಿದೆ.

ಇದಕ್ಕು ಮೊದಲು ಇನ್ನಿಬ್ಬರೂ ಸೇರ್ಪಡೆ: ಇಂದು ಜೆಡಿಎಸ್​ ಪಕ್ಷದಿಂದ ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ 5 ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷ ತೊರೆದ ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್​ ಆರ್​ ಸಂತೋಷ್​ ಅವರು ಜೆಡಿಎಸ್​ ಪಕ್ಷವನ್ನು ಸೇರಿದರು. ಹಾಗೆಯೇ ಕಾಂಗ್ರೆಸ್​ ತೊರೆದು ಬಂದ ಬಾಗಲಕೋಟೆಯ ದೇವರಾಜ್​ ಪಾಟೀಲ್​ ಅವರು ಕೂಡ ಜೆಡಿಎಸ್​ ಪಕ್ಷವನ್ನು ಸೇರಿದರು. ಇವರನ್ನು ಮಾಜಿ ಮುಖ್ಯಮಂತ್ರಿ ಹೆಚ್ .​ಡಿ ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರು ನಾಯಕರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.

ಇದನ್ನೂ ಓದಿ: ಸಿಂಧನೂರು, ಮಾನ್ವಿಯಲ್ಲಿ ಮಾಜಿ ಶಾಸಕರಿಗೆ ಮಣೆ.. ದೇವದುರ್ಗದಲ್ಲಿ ಶ್ರೀದೇವಿಗೆ ಒಲಿದ ಟಿಕೆಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.