ದಾವಣಗೆರೆ: ಮತದಾರರ ಗುರುತಿನ ಚೀಟಿಗಳನ್ನು ಅನಧಿಕೃತವಾಗಿ ಮುದ್ರಣ ಮಾಡುತ್ತಿರುವ ಆರೋಪದಡಿ ಹರಿಹರ ತಾಲೂಕು ಕಚೇರಿ ಎದುರಿಗಿರುವ ಶಿಲ್ಪಾ ಝರಾಕ್ಸ್ ಸೆಂಟರ್ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರು ಬಂದ ಹಿನ್ನೆಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಹರಿಹರ ತಹಶೀಲ್ದಾರ್ ಡಾ. ಅಶ್ವಥ್ ಎಂ.ಬಿ ನೇತೃತ್ವದಲ್ಲಿ ಶಿಲ್ಪಾ ಝರಾಕ್ಸ್ ಸೆಂಟರ್ ಮೇಲೆ ದಾಳಿ ಮಾಡಿದ್ದು, ಮಾಲೀಕ ಪಾಂಡುರಂಗಪ್ಪ ವಿರುದ್ಧ ದೂರು ದಾಖಲಿಸಿ, ತನಿಖೆಗೆ ಆದೇಶಿಸಿದ್ದಾರೆ.
ತಹಶೀಲ್ದಾರ್ ಡಾ ಅಶ್ವಥ್ ಅವರು ಝರಾಕ್ಸ್ ಅಂಗಡಿಗೆ ಭೇಟಿ ನೀಡಿದ ವೇಳೆ ಮಾಲೀಕ ಪಾಂಡುರಂಗಪ್ಪ ಅವರು ಅನಧಿಕೃತ ಮತದಾರರ ಗುರುತಿನ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದರು. ಈ ವೇಳೆ ಅಂಗಡಿ ಮಾಲೀಕನನ್ನು ವಿಚಾರಣೆ ವೇಳೆ ಖಾಸಗಿ ವೆಬ್ ಸೈಟ್ ನಲ್ಲಿ ಮತದಾರರ ಭಾವಚಿತ್ರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುತ್ತಿದ್ದರು. ನಂತರ ಮತದಾರರ ಗುರುತಿನ ಚೀಟಿಯನ್ನು ಕಲರ್ ಪ್ರಿಂಟ್ ತೆಗೆದು ನಕಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂಗಡಿ ಮಾಲೀಕನ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ 242/2022 ಕಲಂ 420, 464, 465, 468, ಐಪಿಸಿ ಮತ್ತು ಕಲಂ: 65, 66,66(E), 74 ಐಟಿ ಕಾನೂನಡಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಇದನ್ನೂಓದಿ:ಪೆರೋಲ್ ಪಡೆದು 15 ವರ್ಷಗಳಿಂದ ನಾಪತ್ತೆ.. ಆಯುರ್ವೇದ ಔಷಧಿ ಮಾರಾಟಗಾರನಾಗಿದ್ದ ಆರೋಪಿ ಅಂದರ್