ETV Bharat / state

ಪ್ರತಿಪಕ್ಷಗಳಿಗೆ ಶಕ್ತಿ ತಂತ್ರಗಾರಿಕೆ ಇರುತ್ತದೆ, ಹಗುರವಾಗಿ ತೆಗೆದುಕೊಳ್ಳಬೇಡಿ: ಕಾರ್ಯಕರ್ತರಿಗೆ ಬಿಎಸ್​ವೈ ಸಂದೇಶ - ದಾವಣಗೆರೆ

ದಾವಣಗೆರೆಯ ತ್ರಿಶೂಲ್ ಭವನದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಬೇಕಾಗಿದೆ. ಎಸ್​ಸಿ, ಎಸ್​ಟಿ, ಹಿಂದುಳಿದ ಸಮುದಾಯದ ಜನರನ್ನು ಪಕ್ಷಕ್ಕೆ ಸೇರಿಸಬೇಕಾಗಿದೆ. ಆಗ ಪಕ್ಷ ಮತ್ತಷ್ಟು ಬಲವಾಗುತ್ತದೆ ಎಂದರು.

Bengaluru
ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
author img

By

Published : Sep 19, 2021, 2:04 PM IST

ದಾವಣಗೆರೆ: ಯಾರು ಸಹ ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ಅವರದ್ದೇಯಾದ ಶಕ್ತಿ ಹಾಗೂ ತಂತ್ರಗಾರಿಕೆ‌ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ನಗರದ ತ್ರಿಶೂಲ್ ಭವನದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಬೇಕಾಗಿದೆ. ಎಸ್​ಸಿ, ಎಸ್​ಟಿ, ಹಿಂದುಳಿದ ಸಮುದಾಯದ ಜನರನ್ನು ಪಕ್ಷಕ್ಕೆ ಸೇರಿಸಬೇಕಾಗಿದೆ. ಆಗ ಪಕ್ಷ ಮತ್ತಷ್ಟು ಬಲವಾಗುತ್ತದೆ ಎಂದರು.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ನಾನು ಅಧಿಕಾರದಲ್ಲಿ‌ದ್ದಾಗ ದಾವಣಗೆರೆಯಲ್ಲಿ ಬೃಹತ್ ಸಮವೇಶ ಮಾಡಿದ್ದೇವೆ. ಮೊದಲೆಲ್ಲ ಸಮಾವೇಶದಲ್ಲಿ 50-60 ಸಾವಿರ ಜನರು ಸೇರುತ್ತಿದ್ದರು. ಅವರೇ ಗಾಡಿಗಳನ್ನು ಮಾಡಿಕೊಂಡು ಬರುತ್ತಿದ್ದರು. ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಹೇಳಿದರು.

ನಾನು ರಾಜ್ಯ ಪ್ರವಾಸಕ್ಕೆ ಹೋಗುವಾಗ ಶಾಸಕರು, ಸಚಿವರು ಕಾರ್ಯಕರ್ತರು ಇರುತ್ತಾರೆ. ನಾಲ್ಕು ತಂಡಗಳನ್ನು ಮಾಡಿ ರಾಜ್ಯ ಪ್ರವಾಸ ಮಾಡಬೇಕಿದೆ. ಪ್ರತಿಯೊಂದು ಬೂತ್​ಗಳಲ್ಲಿ ಪಕ್ಷ ಸಂಘಟನೆಯಾಗಬೇಕು. ಮನೆ‌ ಮನೆಗೆ ಮೋದಿಯವರ ಕಾರ್ಯಕ್ರಮವನ್ನು ತಲುಪಿಸಬೇಕಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಸಾಕಷ್ಟು ಉತ್ತಮ ಅಡಳಿತ ನಡೆಸಿದರು. ಆದರೆ ಅದನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಫಲವಾಗಿದ್ದರು ಎಂದರು.

ದೇಗುಲಗಳ ತೆರವು ಬಗ್ಗೆ ಚರ್ಚೆ: ಯಾವುದೇ ಕಾರಣಕ್ಕೂ ದೇಗುಲಗಳ ತೆರವು ಮಾಡುವುದಿಲ್ಲ. ಬೇಕಾದರೆ ಸುಪ್ರೀಂ ಕೋರ್ಟ್ ತೀರ್ಪು ಬಂದರೆ ಮೇಲ್ಮನವಿಯನ್ನು ಸಲ್ಲಿಸುತ್ತೇವೆ. ದೇವಸ್ಥಾನಗಳನ್ನು ಕೆಡುವುದನ್ನು ನಿಲ್ಲಿಸಲು ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಒಂದೆರಡು ಘಟನೆಗಳಿಂದ ಕಾರ್ಯಕರ್ತರು ಬೇಸರ ಮಾಡಿಕೊಳ್ಳಬಾರದು. ಮೋದಿಯವರ ಹೆಸರು ಹೇಳಿಕೊಂಡು ಗೆಲುವು ಸಾಧಿಸದೇ ನಮ್ಮ ಕೆಲಸದಿಂದ‌ ಗೆಲುವು ಸಾಧಿಸೋಣ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.